ಶಿವಮೊಗ್ಗ: ಸಾಕಿದ ಪ್ರಾಣಿಗಳಲ್ಲಿ ನಾಯಿ, ಬೆಕ್ಕು ಎಲ್ಲರಿಗೂ ಅಚ್ಚುಮೆಚ್ಚು. ಸಾಕಿದ ಪ್ರಾಣಿಗಳ ಪ್ರೀತಿಯೂ ಸಹ ಮಾಲೀಕನ ಮೇಲೆ ಅಪಾರವಾಗಿರುವ ಉದಾಹರಣಗಳಿವೆ. ಆದರೆ ಸಾಕಿದ ಬೆಕ್ಕು ಮನೆಯೊಡತಿಯನ್ನೇ ಬಲಿ ಪಡೆದುಕೊಂಡ ದುರ್ಘಟನೆ ಶಿವಮೊಗ್ಗದಲ್ಲಿ ನಡೆದಿದೆ.
ಸಾಕು ಬೆಕ್ಕು ಕಚ್ಚಿ ಮಹಿಳೆ ಸಾವನ್ನಪ್ಪಿದ ಘಟನೆ ಶಿವಮೊಗ್ಗದ ಶಿಕಾರಿಪುರ ತಾಲೂಕಿನ ತರಲಘಟ್ಟದಲ್ಲಿ ನಡೆದಿದೆ. 50 ವರ್ಷ ವಯಸ್ಸಿನ ಗಂಗೀಬಾಯಿ ಎಂಬ ಮಹಿಳೆ ಸಾವನ್ನಪ್ಪಿದ್ದಾರೆ. ಮೊದಲು ತರಲಘಟ್ಟದ ಕ್ಯಾಂಪ್ನಲ್ಲಿರುವ ಯುವನೋರ್ವನ ಮೇಲೆ ದಾಳಿ ಮಾಡಿತ್ತು. ಬಳಿಕ ಬೆಕ್ಕು ಎರಡು ತಿಂಗಳ ಹಿಂದೆ ಮಹಿಳೆಗೆ ಕಚ್ಚಿತ್ತು. ಬೆಕ್ಕು ಕಚ್ಚಿದ ಪರಿಣಾಮ ರೇಬಿಸ್ ಕಾಯಿಲೆಗೆ ಮಹಿಳೆಯು ಮೃತಪಟ್ಟಿದ್ದಾಳೆ
ಚೇತರಿಕೆ ಕಂಡ ಹುಮ್ಮಸ್ಸಿನಲ್ಲಿ ಮಹಿಳೆ ಇಂಜೆಕ್ಷನ್ ತೆಗೆದುಕೊಳ್ಳುವುದಕ್ಕೆ ನಿರ್ಲಕ್ಷ ಮಾಡಿದ್ದಳು. ಈ ಹಿನ್ನಲೆಯಲ್ಲಿ ಮೊನ್ನೆಯಿಂದ ಬೆಕ್ಕು ಕಚ್ಚಿದ ಮಹಿಳೆಯ ಆರೋಗ್ಯದಲ್ಲಿ ಏರುಪೇರು ಶುರುವಾಗಿತ್ತು. ದೇಹದಲ್ಲಿ ನಂಜು ಏರುತ್ತಲೇ ಹೋಗಿತ್ತು. ಶಿವಮೊಗ್ಗದ ಮೆಗ್ಗಾನ್ ಜಿಲ್ಲಾಸ್ಪತ್ರೆಗೆಯಲ್ಲಿ ಮಹಿಳೆಗೆ ದಾಖಲು ಮಾಡಲಾಗಿತ್ತು. ಚಿಕಿತ್ಸೆ ಫಲಕಾರಿಯಾಗದೇ ಮಹಿಳೆಯು ಇಂದು ಮೃತಪಟ್ಟಿದ್ದಾಳೆ.
ಯಾವುದೇ ಪ್ರಾಣಿಗಳು ಕಚ್ಚಿದ್ರೆ ಕನಿಷ್ಠ ನಂಜು ಆಗದಂತೆ ಐದು ಇಂಜೇಕ್ಷನ್ ಪಡೆದುಕೊಳ್ಳಬೇಕು. ಆದ್ರೆ ಇಲ್ಲಿ ಮಹಿಳೆಯು ಒಂದೇ ಇಂಜೆಕ್ಷನ್ ಪಡೆದು ಬಳಿಕ ನಿರ್ಲಕ್ಷ್ಯ ಮಾಡಿದ್ದಾಳೆ. ಗುಣಮುಖ ಆಗಿದೆ ಎಂದು ಭಾವಿಸಿ ಮಹಿಳೆಯು ನಾಟಿ ಮಾಡಲು ಹೋಗಿದ್ದಾಳೆ. ನೀರಿಗೆ ಇಳಿದು ಕೃಷಿ ಚಟುವಟಿಕೆಯಲ್ಲಿ ತೊಡಗಿಕೊಂಡಿದ್ದಾಳೆ. ಆದರೆ ರೇಬಿಸ್ನಿಂದಾಗಿ ಅನಾರೋಗ್ಯ ಕಾಡಿದ ಪರಿಣಾಮ ಮತ್ತೆ ಗಂಗೀಬಾಯಿ ಆರೋಗ್ಯದಲ್ಲಿ ಏರುಪೇರು ಆಗಿದ್ದು, ಇದೀಗ ಚಿಕಿತ್ಸೆ ಫಲಕಾರಿಯಾಗದೇ ಮಹಿಳೆಯು ಇಲ್ಲಿ ಸಾವಿನ ಮನೆ ಸೇರಿದ್ದಾಳೆ.
ಬೆಕ್ಕು ಅಂದ್ರೆ ಎಲ್ಲರಿಗೂ ತುಂಬಾ ಇಷ್ಟು. ವಿವಿಧ ಜಾತಿಯ ದೇಶ ವಿದೇಶದ ಬೆಕ್ಕುಗಳನ್ನು ಜನರು ಮನೆಯಲ್ಲಿ ಸಾಕುತ್ತಾರೆ. ಆದ್ರೆ ಸಾಕು ಪ್ರಾಣಿಗಳ ಕುರಿತು ಸಾಕಷ್ಟು ಮುಂಜಾಗೃತೆ ವಹಿಸಬೇಕಿದೆ. ಇಲ್ಲದಿದ್ದರೇ ಅಪ್ಪಿ ತಪ್ಪಿ ಇಂತಹ ಪೆಟ್ ಕ್ಯಾಟ್ ಅಟ್ಯಾಕ್ ಮಾಡಿದ್ರೆ ಜೀವ ಕೂಡಾ ಹೋಗುತ್ತದೆ ಎನ್ನುವುದಕ್ಕೆ ಶಿವಮೊಗ್ಗ ಮಹಿಳೆ ಸಾವು ಉತ್ತಮ ಉದಾಹರಣೆಯಾಗಿದೆ.