Monday, December 23, 2024
spot_img
Homeಕ್ರೈಂವಾಲ್ಮೀಕಿ ನಿಗಮದ ಹಣದಲ್ಲಿ ಬರೋಬ್ಬರಿ 10 ಕೆಜಿ ಚಿನ್ನದ ಬಿಸ್ಕೆಟ್ ಖರೀದಿ ಮಾಡಿದ್ದ ಕುಳ..!!

ವಾಲ್ಮೀಕಿ ನಿಗಮದ ಹಣದಲ್ಲಿ ಬರೋಬ್ಬರಿ 10 ಕೆಜಿ ಚಿನ್ನದ ಬಿಸ್ಕೆಟ್ ಖರೀದಿ ಮಾಡಿದ್ದ ಕುಳ..!!

ಮಹರ್ಷಿ ವಾಲ್ಮೀಕಿ ಪರಿಶಿಷ್ಟ ಪಂಗಡಗಳ ಅಭಿವೃದ್ಧಿ ನಿಗಮದ ಹಣ ಅಕ್ರಮ ವ್ಯವಹಾರಕ್ಕೆ ಸಂಬಂಧಿಸಿದಂತೆ ಎಸ್‌ಐಟಿ, ಸಿಐಡಿ ತಂಡಗಳು ತನಿಖೆ ಚುರುಕುಗೊಳಿಸಿದ್ದು, ಈ ಹಗರಣದ ಪ್ರಮುಖ ಆರೋಪಿ ಸತ್ಯನಾರಾಯಣ ವರ್ಮಾ ಮನೆಯಲ್ಲಿ ಬರೋಬ್ಬರಿ ಹತ್ತು ಕೆಜಿ ಚಿನ್ನದ ಬಿಸ್ಕೆಟ್ ವಶಕ್ಕೆ ಪಡೆದ ಎಸ್‌ಐಟಿ ತಂಡ

ಮಹರ್ಷಿ ವಾಲ್ಮೀಕಿ ಪರಿಶಿಷ್ಟ ಪಂಗಡಗಳ ಅಭಿವೃದ್ಧಿ ನಿಗಮದ ಹಣ ಅಕ್ರಮ ವ್ಯವಹಾರಕ್ಕೆ ಸಂಬಂಧಿಸಿದಂತೆ ಎಸ್‌ಐಟಿ, ಸಿಐಡಿ ತಂಡಗಳು ತನಿಖೆ ಚುರುಕುಗೊಳಿಸಿದ್ದು, ಈ ಹಗರಣದ ಪ್ರಮುಖ ಆರೋಪಿ ಸತ್ಯನಾರಾಯಣ ವರ್ಮಾ ಮನೆಯಲ್ಲಿ ಬರೋಬ್ಬರಿ ಹತ್ತು ಕೆಜಿ ಚಿನ್ನದ ಬಿಸ್ಕೆಟ್ ಪತ್ತೆಯಾಗಿದ್ದು, ಎಸ್‌ಐಟಿ ವಶಕ್ಕೆ ಪಡೆದ ಬಗ್ಗೆ ನ್ಯೂಸ್ 88 ಕನ್ನಡ ವಾಹಿನಿಗೆ ಎಸ್‌ಐಟಿ ಉನ್ನತ ಮೂಲಗಳು ತಿಳಿಸಿವೆ.

ವಾಲ್ಮೀಕಿ ಹಗರಣದ ದುಡ್ಡಿನಿಂದಲೇ ಚಿನ್ನದ ಬಿಸ್ಕೆಟ್ ಖರೀದಿಸಿದ್ದ ಸತ್ಯನಾರಾಯಣ್ ವರ್ಮಾ. ಎಸ್‌ಐಟಿ ತಂಡ ವಿಚಾರಣೆ ವೇಳೆ 15 ಕೆಜಿ ಗೋಲ್ಡ್ ಕೊಡುವುದಾಗಿ ಹೇಳಿದ್ದ ಆರೋಪಿ. ಆದರೆ ಸದ್ಯ ತನ್ನ ಹೈದರಾಬಾದ್ ಪ್ಲಾಟ್ ನಲ್ಲಿ 10 ಕೆ.ಜಿ.ಚಿನ್ನದ ತೋರಿಸಿದ್ದಾನೆ. ಇನ್ನುಳಿದ ಚಿನ್ನದ ಬಿಸ್ಕೆಟ್‌ಗಾಗಿ ಎಸ್‌ಐಟಿ ಪೊಲೀಸರು ತೀವ್ರ ಶೋಧ ನಡೆಸಿದ್ದಾರೆ. ಇದುವರೆಗೆ ವಾಲ್ಮೀಕಿ ಹಗರಣದ ಹಣದಿಂದ ಬರೊಬ್ಬರಿ 35 ಕೆಜಿ ಚಿನ್ನದ ಬಿಸ್ಕೆಟ್ ಖರೀದಿ ಮಾಡಿರುವ ಕುಳ!

ವಾಲ್ಮೀಕಿ ನಿಗಮ ಹಗರಣದ ಪ್ರಮುಖ ಆರೋಪಿ ಸತ್ಯನಾರಾಯಣ್ ವರ್ಮಾರನ್ನ ಎಸ್‌ಐಟಿ ತಂಡ ಸೆರೆಹಿಡಿದಿದ್ದೇ ರೋಚಕ ಕತೆ. ಬಂಧನಕ್ಕೆ ಮೊದಲು ಮಾಸ್ಟರ್ ಪ್ಲಾನ್ ಮಾಡಿದ್ದ ಎಸ್‌ಐಟಿ ತಂಡ. ಸತತ ಒಂದು ವಾರಗಳ ಕಾಲ ಹುಡುಕಾಟ ನಡೆಸಿತ್ತು. ಆದರೂ ಎಲ್ಲಿಯೂ ಪತ್ತೆಯಾಗಿರಲಿಲ್ಲ. ಬಳಿಕ ಆತನ ಆಪ್ತ ವಲಯದವರನ್ನ ಹಿಡಿದುಕೊಂಡು ಆರೋಪಿ ವರ್ಮಾನ ಬೆನ್ನು ಬಿದ್ದಿದ್ದಿ ಎಸ್‌ಐಟಿ ಕೊನೆಗೂ ವರ್ಮಾರನ್ನ ಲಾಕ್ ಮಾಡಿದ ಪೊಲೀಸರು.

ಬೆಂಗಳೂರಿಗೆ ಕರೆ ತಂದು ವಿಚಾರಣೆ:

ಹೈದರಾಬಾದ್‌ನಿಂದ ವಶಕ್ಕೆ ಪಡೆದ ಬಳಿಕ ಬೆಂಗಳೂರಿಗೆ ಕರೆತಂದು ವಿಚಾರಣೆಗೆ ಒಳಪಡಿಸಿದ್ದ ಎಸ್‌ಐಟಿ. ವಿಚಾರಣೆ ವೇಳೆ ಹಣ, ಪ್ಲಾಟ್ ಖರೀದಿ, ಚಿನ್ನದ ಬಿಸ್ಕೆಟ್ ಖರೀದಿ ಮಾಡಿರುವ ಬಗ್ಗೆ ಬಾಯ್ಬಿಟ್ಟಿದ್ದ ಆರೋಪಿ. ನಂತರ ಸರ್ಚ್ ವಾರಂಟ್ ಪಡೆದು ಹೈದರಾಬಾದ್ ನ ಸೀಮಾ ಪೇಟೆ, ಮೀಯಾಪುರದಲ್ಲಿನ ವಾಸವಿ ಬಿಲ್ಡರ್ಸ್ ನಲ್ಲಿ ತಲಾ ಎರಡು ಪ್ಲಾಟ್ ನಲ್ಲಿ ಖರೀದಿ ಮಾಡಿರುವುದ ಪತ್ತೆಹಚ್ಚಿದ ತನಿಖಾ ತಂಡ. ಒಟ್ಟು ಬರೋಬ್ಬರಿ 11 ಪ್ಲಾಟ್ ಖರೀದಿ ಮಾಡಿರುವ ಬಗ್ಗೆ ಎಸ್‌ಐಟಿ ಮಾಹಿತಿ ಕಲೆಹಾಕಿದೆ.

ಬ್ಯಾಗ್‌ನಲ್ಲಿತ್ತು 8 ಕೋಟಿ ಹಣ!

ವಾಲ್ಮೀಕಿ ಹಗರಣದ ಬಳಿಕ ಹೈದರಾಬಾದ್‌ನ ಪ್ಲಾಟ್‌ನಲ್ಲಿ ಯಾರಿಗೂ ಗೊತ್ತಾಗದಂತೆ ಬರೊಬ್ಬರಿ 8ಕೋಟಿ ಹಣ ಅಡಗಿಸಿಟ್ಟಿದ್ದ ಆರೋಪಿ ವರ್ಮಾ, ಶೋಧ ಕಾರ್ಯಾಚರಣೆ ವೇಳೆ ಹಣದ ಬಂಡಲ್ ಕಂಡು ಶಾಕ್ ಆಗಿದ್ದ ಎಸ್‌ಐಟಿ ತಂಡ ಬ್ಯಾಗ್ ತೆಗೆದು ಎಲ್ಲ ಹಣ ಎಣಿಸಿ ನೋಡುವಷ್ಟರಲ್ಲಿ ಎಸ್‌ಐಟಿ ಪೊಲೀಸರೇ ಸುಸ್ತಾಗಿದ್ದರು. ಬಳಿಕ ಹಣ ಎಣಿಕೆ ಮಿಷನ್ ತರಿಸಿ ಎಣಿಕೆ ಮಾಡಿದ್ದ ಎಸ್‌ಐಟಿ. ಸತ್ಯನಾರಾಯಣ ವರ್ಮಾ ಅಂತಿಂಥ ಕುಳ ಅಲ್ಲ ಖತರ್ನಾಕ್ ಆಗಿದ್ದಾನೆ. ಅದ್ಯಾಗೂ ಎಸ್‌ಐಟಿ ತಂಡದ ಕೆಲವು ಎಡವಟ್ಟಿನಿಂದ ವರ್ಮಾಗೆ ಅನುಕೂಲವಾಗಿದೆ. ಕಾರ್ಯಾಚರಣೆ ಇನ್ನು ಚುರುಕುಗೊಳಿಸಬೇಕಾಗಿದೆ. ನಿಧಾನಗತಿಯ ತನಿಖೆಯಿಂದ ವರ್ಮಾಗೆ ವರವಾಗಿದೆ ಎನ್ನಲಾಗುತ್ತಿದೆ.

 

RELATED ARTICLES

LEAVE A REPLY

Please enter your comment!
Please enter your name here

- Advertisment -spot_img

Most Popular

Recent Comments