ಹುಬ್ಬಳ್ಳಿ: ಹುಬ್ಬಳ್ಳಿ ಹೊರವಲಯದಲ್ಲಿ ಭೀಕರ ರಸ್ತೆ ಅಪಘಾತ ಸಂಭವಿಸಿದ್ದು, ಮಗು ಸೇರಿದಂತೆ ಎಂಟು ಜನರಿಗೆ ಗಂಭೀರವಾದ ಗಾಯಗಳಾಗಿವೆ.
ಹೌದು, ತಾರಿಹಾಳ ಬಳಿಯ ಧಾರಾವತಿ ಆಂಜನೇಯ ದೇವಸ್ಥಾನ ಬಳಿಯಲ್ಲಿ ಆಟೋ ಮತ್ತೆ ಕ್ಯಾಂಟರ್ ವಾಹನದ ಮಧ್ಯೆ ಈ ಅಪಘಾತ ನಡೆದಿದ್ದು, ಓವರ್ ಟೇಕ್ ಮಾಡುವ ಭರದಲ್ಲಿ ಕ್ಯಾಂಟರ್ ವಾಹನದ ಚಾಲಕ ಎದುರಿಗೆ ಬರುತ್ತಿದ್ದ ಆಟೋಗೆ ಡಿಕ್ಕಿ ಹೊಡೆದಿದ್ದಾನೆ. ಪರಿಣಾಮ ಆಟೋದಲ್ಲಿದ್ದ ಏಳು ಜನರಿಗೆ ಗಂಭೀರವಾಗಿ ಗಾಯಗಳಾಗಿವೆ.
ಸದ್ಯ ವಿಷಯ ತಿಳಿಯುತ್ತಿದಂತೆ ಸ್ಥಳಕ್ಕೆ ಸಂಚಾರಿ ಪೊಲೀಸರು ಆಗಮಿಸಿದ್ದು, ಗಾಯಗೊಂಡವರನ್ನು ಕಿಮ್ಸ್ ಆಸ್ಪತ್ರೆಗೆ ರವಾನಿಸಿದ್ದಾರೆ.
ಇನ್ನು ಗಾಯಗೊಂಡವ ಮಾಹಿತಿ ತಿಳಿದುಬಂದಿಲ್ಲ, ಅಪಘಾತ ಮಾಡಿ ಟ್ಯಾಂಕರ್ ಚಾಲಕ ವಾಹನವನ್ನು ಬಿಟ್ಟು ಪರಾರಿಯಾಗಿದ್ದಾನೆಂದು ತಿಳಿದುಬಂದಿದೆ..