Friday, December 20, 2024
spot_img
Homeನ್ಯೂಸ್ಮಗಳು ತೀವ್ರ ಮುಂಗೋಪಿ ಅನ್ನೋ ಕಾರಣಕ್ಕೆ ಮಾಂತ್ರಿಕನ ಬಳಿ ಕರೆದೊಯ್ದ ಪೋಷಕರು: ಮುಂದೆ ನಡೆದಿದ್ದೇನು...

ಮಗಳು ತೀವ್ರ ಮುಂಗೋಪಿ ಅನ್ನೋ ಕಾರಣಕ್ಕೆ ಮಾಂತ್ರಿಕನ ಬಳಿ ಕರೆದೊಯ್ದ ಪೋಷಕರು: ಮುಂದೆ ನಡೆದಿದ್ದೇನು ಗೊತ್ತಾ?

ಬರೇಲಿ: ಮಗಳು ತೀವ್ರ ಮುಂಗೋಪಿ ಅನ್ನೋ ಕಾರಣಕ್ಕೆ ಪೋಷಕರು ಮಾಂತ್ರಿಕನ ಬಳಿ ಕರೆದೊಯ್ದಿದ್ದಾರೆ. ತಂತ್ರ ಮಂತ್ರಗಳ ಮೂಲಕ ಮಗಳ ಮುಂಗೋಪ ಕಡಿಮೆಯಾಗಲಿದೆ ಅನ್ನೋದು ಪೋಷಕರ ಕುರುಡು ನಂಬಿಕೆಯಾಗಿತ್ತು. 14 ವರ್ಷದ ಬಾಲಕಿ ಹಾಗೂ ಪೋಷಕರನ್ನೂ ಕೂರಿಸಿಕೊಂಡು ಕೆಲ ಮಂತ್ರಗಳನ್ನು ಪಠಿಸಿದ್ದಾನೆ. ಕೆಲ ಪೂಜೆಗಳು ನಡೆದಿದೆ. ಮಗಳೊಂದಿಗೆ ಮರಳಿ ಮನೆಗೆ ಬಂದ ಪೋಷಕರು ನೆಮ್ಮದಿಯಿಂದ ಮಲಗಿದ್ದಾರೆ. ಆದರೆ ಮರು ದಿನ ಬೆಳಗ್ಗೆ ಎದ್ದಾಗ ಮನೆಯಲ್ಲಿ ಮಗಳೇ ಇರಲಿಲ್ಲ. ಎಲ್ಲೆಡೆ ಹುಡುಕಾಡಿದರೂ ನಾಪತ್ತೆ. ದೂರು ಸ್ವೀಕರಿಸಿದ ಪೊಲೀಸರು ಕಾರ್ಯಾಚರಣೆ ಆರಂಭಿಸಿದ್ದಾರೆ.

ಈ ವೇಳೆ 14 ವರ್ಷದ ಬಾಲಕಿಯನ್ನು ಇದೇ ಮಾಂತ್ರಿಕ ಅಪಹರಿಸಿರುವುದು ಪತ್ತೆಯಾಗಿದೆ. ಈ ಘಟನೆ ಉತ್ತರ ಪ್ರದೇಶದ ರಾಯಬರೇಲಿಯಲ್ಲಿ ನಡೆದಿದೆ

ಮಗಳ ಮುಂಗೋಪ ಬಿಡಿಸಲು ಪೋಷಕರು ಮಂತ್ರವಾದಿಯಿಂದ ಸಾಧ್ಯ ಎಂದು ನಂಬಿದ್ದಾರೆ. ಮಗಳ ಎಲ್ಲಾ ಸಮಸ್ಯೆಗಳನ್ನು ನಿವಾರಿಸುವುದಾಗಿ ಮಂತ್ರವಾದಿ ಹೇಳಿಕೊಂಡಿದ್ದಾನೆ. ಹೀಗಾಗಿ ಪೋಷಕರು ಮಗಳನ್ನು ಕರೆದುಕೊಂಡು ನೇರವಾಗಿ ಮಂತ್ರವಾದಿ ಬಳಿ ಬಂದಿದ್ದಾರೆ. ಮಂತ್ರವಾದಿ ಹಲವು ಪೂಜೆ, ಮಂತ್ರಗಳನ್ನು ಪಠಿಸಿದ್ದಾನೆ. ಬಳಿಕ ಮುಂದಿನ ವಾರ ಮತ್ತೆ ಬಾಲಕಿಯನ್ನು ಕರೆದುಕೊಂಡು ಬರುವಂತೆ ಪೋಷಕರಿಗೆ ಸೂಚಿಸಿದ್ದಾನೆ.

ಮನೆಗೆ ಬಂದ ಪೋಷಕರು ಸಾಮಾಧಾನಗೊಂಡಿದ್ದಾರೆ. ಆದರೆ ಪೋಷಕರಿಗೆ ಕರೆ ಮಾಡಿ ಬಾಲಕಿ ಜೊತೆ ಮಾತನಾಡಿದ ಮಂತ್ರವಾದಿ, ಇಂದು ರಾತ್ರಿ 12 ಗಂಟೆಗೆ ಪೋಷಕರು,ಕುಟುಂಬಸ್ಥರು ಯಾರಿಗೂ ಹೇಳದಂತೆ ಬರುವಂತೆ ಸೂಚಿಸಿದ್ದಾನೆ. ಎಲ್ಲಾ ಸಮಸ್ಯೆಗಳು ಪರಿಹರಿಸುತ್ತೇನೆ ಎಂದಿದ್ದಾನೆ. ಪೋಷಕರು ಅತೀಯಾಗಿ ಗೌರವಿಸುವ ಈ ಮಂತ್ರವಾದಿಯೇ ಹೇಳಿದ ಬಳಿಕ ಇನ್ನೇನಿದೆ ಎಂದು ಬಾಲಕಿ ಮಧ್ಯರಾತ್ರಿ 12 ಗಂಟೆಗೆ ಯಾರಿಗೂ ತಿಳಿಸದೆ ಮಂತ್ರವಾದಿ ಬಳಿ ತೆರಳಿದ್ದಾಳೆ.

ಬಾಲಕಿ ಆಗಮಿಸಿದ ಬೆನ್ನಲ್ಲೇ ಪೂಜೆ ಮಾಡೋದಿದೆ, ಮಂತ್ರ ಪಠಿಸಲು ದೇವಸ್ಥಾನಕ್ಕೆ ತೆರಳಬೇಕಿದೆ ಎಂದು ಆಕೆ ಜೊತೆ ರಹಸ್ಯ ತಾಣಕ್ಕೆ ತೆರಳಿದ್ದಾನೆ. ಇತ್ತ ಬೆಳಗ್ಗೆ ಎದ್ದಾಗ ಪುತ್ರಿ ನಾಪತ್ತೆಯಾಗಿದ್ದಾಳೆ. ಆತಂಕಗೊಂಡ ಪೋಷಕರು ಹುಡುಕಾಡಿದ್ದಾರೆ. ಪತ್ತೆಯಾಗಿಲ್ಲ. ನೇರವಾಗಿ ಮಂತ್ರವಾದಿ ಬಳಿ ಓಡೋಡಿ ಬಂದಿದ್ದಾರೆ. ಪರಿಹಾರಕ್ಕಾಗಿ ಮಂತ್ರವಾದಿ ಬಳಿ ಬಂದ ಪೋಷಕರಿಗೆ ಮತ್ತೊಂದು ಆಘಾತವಾಗಿದೆ. ಮಂತ್ರವಾದಿಯೂ ನಾಪತ್ತೆ. ಫೋನ್ ಕೂಡ ಸ್ವಿಚ್ ಆಫ್.

ಹೀಗಾಗಿ ಪೊಲೀಸ್ ಠಾಣೆಗೆ ತೆರಳಿ ದೂರು ನೀಡಿದ್ದಾರೆ. ಘಟನೆ ವಿವರಿಸಿದಾಗ ಪೊಲೀಸರಿಗೆ ಪರಿಸ್ಥಿತಿ ಅರಿವಾಗಿದೆ. ತಕ್ಷಣವೇ ಮಂತ್ರವಾದಿಯ ಫೋನ್ ಟ್ರಾಕ್ ಮಾಡಿದ್ದಾರೆ. ಬಳಿಕ ಸ್ಥಳಕ್ಕೆ ತೆರಳಿ ಮಂತ್ರವಾದಿಯನ್ನು ಬಂಧಿಸಿದ್ದಾರೆ. ಬಾಲಕಿಯನ್ನು ವಶಕ್ಕೆ ಪಡೆದು ಪೋಷಕರಿಗೆ ಒಪ್ಪಿಸಿದ್ದಾರೆ.

ಮಕ್ಕಳ ತಟ್ಟೆಗೆ ಮೊಟ್ಟೆ ಹಾಕಿ, ಕಸಿದುಕೊಂಡ ಅಂಗನವಾಡಿ ಕಾರ್ಯಕರ್ತೆ, ಸಹಾಯಕಿ ಸಸ್ಪೆಂಡ್‌

RELATED ARTICLES

LEAVE A REPLY

Please enter your comment!
Please enter your name here

- Advertisment -spot_img

Most Popular

Recent Comments