ವೈರಲ್ ಸುದ್ದಿ: ಪ್ರೀತಿ ಮಾಡೋದು ತಪ್ಪಲ್ಲ ಅಂತ ಹೇಳ್ತಾರೆ, ಹಾಗೆ ಎಲೆಂದ್ರಲ್ಲಿ ನಿಮ್ಮ ಪ್ರೀತಿ ಯನ್ನು ವ್ಯಕ್ತ ಪಡಿಸುವುದು ತಪ್ಪು ಅಂತಲೂ ಹೇಳ್ತಾರೆ. ಆದ್ರೆ ಪ್ರೀತಿ-ಪ್ರೇಮದ ಹೆಸರಲ್ಲಿ ಸಾರ್ವಜನಿಕ ಸ್ಥಳಗಳಲ್ಲಿ ಅಸಭ್ಯವಾಗಿ ವರ್ತಿಸುವುದು ತಪ್ಪು ತಾನೆ. ಅದೇ ರೀತಿ ಇಲ್ಲೊಂದು ಜೋಡಿ ಕೂಡಾ ರೈಲ್ವೆ ಸ್ಟೇಷನ್ ಬ್ರಿಡ್ಜ್ ಮೇಲೆ ನಿಂತು ಸಾರ್ವಜನಿಕರ ಎದುರೇ ಪರಸ್ಪರ ತಬ್ಬಿಕೊಂಡು, ಚುಂಬಿಸುತ್ತಾ ಅಸಭ್ಯವಾಗಿ ವರ್ತಿಸಿದ್ದಾರೆ.
ಈ ವಿಡಿಯೋ ಇದೀಗ ಸೋಷಿಯಲ್ ಮೀಡಿಯಾದಲ್ಲಿ ವೈರಲ್ ಆಗಿದ್ದು, ಪ್ರೇಮಿಗಳ ಈ ಅತಿರೇಕದ ವರ್ತನೆಗೆ ಭಾರೀ ಆಕ್ರೋಶ ವ್ಯಕ್ತವಾಗಿದೆ.
ಪ್ರೀತಿಯಲ್ಲಿ ಬಿದ್ದವರಿಗೆ ಜಗತ್ತಿನ ಪರಿಜ್ಞಾನವೇ ಇರೋದಿಲ್ಲ ಎಂದು ಹೇಳ್ತಾರೆ. ಇದೇ ರೀತಿ ಜಗತ್ತಿನ ಪರಿಜ್ಞಾನವೇ ಇಲ್ಲದೆ ಸಾರ್ವಜನಿಕ ಸ್ಥಳಗಳಲ್ಲಿ ಪ್ರೇಮಿಗಳು ತೋರುವ ಹುಚ್ಚಾಟಗಳ ಸಂಖ್ಯೆ ದಿನದಿಂದ ದಿನಕ್ಕೆ ಹೆಚ್ಚಾಗುತ್ತಿದೆ.
ಚಲಿಸುತ್ತಿರುವ ರೈಲಿನಲ್ಲಿ ರೊಮ್ಯಾನ್ಸ್ ಮಾಡಿದ, ಕಾಲೇಜ್ ಕ್ಯಾಂಪಸ್‌ನಲ್ಲಿ ಮೈ ಮರೆತು ಅಸಭ್ಯವಾಗಿ ವರ್ತಿಸಿದ ಕೆಲವಷ್ಟು ವಿಡಿಯೋಗಳು ಈ ಹಿಂದೆಯೂ ವೈರಲ್ ಆಗಿದ್ದವು. ಇದೀಗ ಇಂತಹದ್ದೇ ಪ್ರೇಮಿಗಳಿಬ್ಬರ ಅತಿರೇಕದ ವರ್ತನೆಯ ವಿಡಿಯೋವೊಂದು ವೈರಲ್ ಆಗಿದ್ದು, ರೈಲ್ವೆ ಸ್ಟೇಷನ್ ಬ್ರಿಡ್ಜ್ ಮೇಲೆ ನಿಂತು ಜೋಡಿಯೊಂದು ಲೋಕದ ಅರಿವೇ ಇಲ್ಲದೆ ಪರಸ್ಪರ ತಬ್ಬಿಕೊಂಡು ಚುಂಬನ ಮಾಡಿದ್ದಾರೆ. ಸಾರ್ವಜನಿಕ ಸ್ಥಳದಲ್ಲಿ ಪ್ರೇಮಿಗಳ ಈ ಅತಿರೇಕದ ವರ್ತನೆಗೆ ನೆಟ್ಟಿಗರು ಫುಲ್ ಗರಂ ಆಗಿದ್ದಾರೆ.
ಬ್ರೆಜಿಲ್‌ನ ಸಾವೊ ಪಾಲೊ ಬಳಿ ವಿಮಾನ ಪತನ: ಸಿಬ್ಬಂದಿ ಸೇರಿ 62 ಪ್ರಯಾಣಿಕರ ಸಾವು