ನಿಮ್ಮ ಮನೆಯಲ್ಲಿ ಶುಭ ಕಾರ್ಯ ಇದೆಯಾ? ಅಥವಾ ಹಬ್ಬ ಹರಿದಿನ ಇರ್ಲಿ, ಯಾವುದೇ ಶುಭ ಸಂದರ್ಭದ ಸಮಯದಲ್ಲಿ ನಿಮ್ಮ ಮನೆಯಲ್ಲಿ ಸ್ವತಃ ನೀವೇ ಸರಳವಾಗಿ ಉತ್ತರ ಕರ್ನಾಟಕ ಶೈಲಿಯ ಕಡಲೆ ಬೇಳೆ ಹೋಳಿಗೆ ಮಾಡಬಹುದು. ಈ ಹೋಳಿಗೆ ಮಾಡುವ ವಿಧಾನ ಇಲ್ಲಿದೆ ನೋಡಿ.
ಕಡಲೆ ಬೇಳೆ ಹೋಳಿಗೆ ಮಾಡಲು ಬೇಕಾಗುವ ಸಾಮಾಗ್ರಿಗಳು
1 ಕಡಲೆ ಬೇಳೆ
2 ಬೆಲ್ಲ
3 ಮೈದಾಹಿಟ್ಟು
4 ಅಡುಗೆ ಎಣ್ಣೆ
5 ಏಲಕ್ಕಿ
ಹೋಳಿಗೆ ತಯಾರಿಸುವ ವಿಧಾನ
ಒಂದು ಅಗಲವಾದ ಪಾತ್ರೆಯಲ್ಲಿ ಮೈದಾ ಹಿಟ್ಟನ್ನ ಹಾಕಿಕೊಳ್ಳಿ, ಈ ಹಿಟ್ಟಿಗೆ ನೀರನ್ನ ಹಾಕಿ ಮೃದುವಾಗಿ ಹಿಟ್ಟನ್ನ ನಾದಿಕೊಳ್ಳಿ. ಬಳಿಕ ಅರ್ಧ ಚಮಚ ಅಡುಗೆ ಎಣ್ಣೆ ಹಾಕಿ ಮತ್ತೆ ನಾದಿಕೊಂಡು ಅರ್ಧ ಗಂಟೆಯವರೆಗೆ ಮುಚ್ಚಿಡಿ.
ತುಂಬಾ ರುಚಿಯಾಗಿರುತ್ತೆ
ಕಡಲೆ ಬೇಳೆಯನ್ನ ಚೆನ್ನಾಗಿ ತೊಳೆದು, ಕುಕ್ಕರಗೆ ನೀರನ್ನ ಹಾಕಿ ಮೂರು ವಿಸಿಲ್ ಹೊಡೆಯುವ ವರೆಗೆ ಕುದಿಸಿಕೊಳ್ಳಿ ಬಳಿಕ ಬೇಯಿಸಿದ ಬೇಳೆಯ ನೀರು ಬಸಿದು ತೆಗೆಯಿರಿ. ಬೇಯಿಸಿದ ಬೆಳೆಗೆ, ಏಲಕ್ಕಿ ಮತ್ತು ಬೆಲ್ಲವನ್ನು ಹಾಕಿ ನುಣ್ಣನೆ ಅರೆಯಿರಿ.
ಅಥವಾ ಮಿಕ್ಸಿ ಜಾರಿಗೆ ಹಾಕಿ ರುಬ್ಬಿಕೊಳ್ಳಿ. ತುಂಬ ಗಟ್ಟಿ ಮಾಡುವುದು ಬೇಡ ಏಕೆಂದರೆ ತಣ್ಣಗಾದ ಮೇಲೆ ಗಟ್ಟಿಯಾಗುತ್ತದೆ. ಹೂರಣ ಬಿಸಿ ಆರಿದ ನಂತರ ಸಣ್ಣ ಸಣ್ಣ ಉಂಡೆಯಾಗಿ ಉಂಡೆ ಮಾಡಿಟ್ಟು ಕೊಳ್ಳಿ. ಉಂಡೆ ಮೃದುವಾಗಿರಬೇಕು.
ಸವಿಯಲು ಸಿದ್ಧ
ನಂತರ ನಾದಿಟ್ಟುಕೊಂಡ ಹಿಟ್ಟನ್ನು ಕೈ ಅಗುಲ ಮಾಡಿಕೊಂಡು ಅದರ ನಡುವೆ ಹೂರಣದ ಉಂಡೆಯನ್ನಿಟ್ಟು ಪ್ಲಾಸ್ಟಿಕ್ ಹಾಳೆ ಮೇಲೆ ಅಥವಾ ಲಟ್ಟಿಸುವ ಮನೆ ಮೇಲೆಟ್ಟು ಅಗುಲವಾಗಿ ಮಾಡಿಕೊಳ್ಳಿ, ನಂತರ ಬೇಯಿಸಿ. ನಂತರ ರುಚಿ ರುಚಿಯಾದ ಹೋಳಿಗೆ ಸವಿಯಲು ಸಿದ್ದವಾಗುತ್ತದೆ.