ಹುಬ್ಬಳ್ಳಿ: ಹೆಬಸೂರ ಗ್ರಾಮದ ವ್ಯಕ್ತಿಯನ್ನ ಕುಸುಗಲ್ ರಿಂಗ್ ರಸ್ತೆಯಲ್ಲಿ ಥಳಿಸಿ ಹಣ ಹಾಗೂ ಮೊಬೈಲ್ ದರೋಡೆ ಮಾಡಿದ್ದ ಮೂವರನ್ನ ಬಂಧನ ಮಾಡುವಲ್ಲಿ ಹುಬ್ಬಳ್ಳಿ ಗ್ರಾಮೀಣ ಠಾಣೆಯ ಪೊಲೀಸರು ಯಶಸ್ವಿಯಾಗಿದ್ದಾರೆ.
ಬಂಧಿತ ಆರೋಪಿಗಳನ್ನ ಹಾನಗಲ್ ರಾಜೀವನಗರದ ವಿನಯ ಕಟ್ಟಿಮನಿ, ಕುಂದಗೋಳ ತಾಲೂಕಿನ ಹೊಸಹಂಚಿನಾಳ ಗ್ರಾಮದ ಜಗದೀಶ ಬಂಡಿವಾಡ ಹಾಗೂ ಹಾನಗಲ್ ವಿವೇಕಾನಂದನಗರದ ಗಣೇಶ ಹೊಂಬರಡಿ ಎಂದು ಗುರುತಿಸಲಾಗಿದೆ. ಆರೋಪಿತರಿಂದ ಬೈಕ್ ಮತ್ತು ಮೊಬೈಲ್ ವಶಕ್ಕೆ ಪಡೆಯಲಾಗಿದೆ.
ಪೊಲೀಸ್ ಇನ್ಸಪೆಕ್ಟರ್ ಮುರಗೇಶ ಚೆನ್ನಣ್ಣನವರ ನೇತೃತ್ವದಲ್ಲಿ ಪಿಎಸ್ಐ ಸಚಿನ ಅಲಮೇಲಕರ, ಸಿಬ್ಬಂದಿಗಳಾದ ಎಸ್.ಐ.ಹಿರೇಹೊಳಿ, ಎನ್.ಎಂ.ಹೊನ್ನಪ್ಪನವರ, ಎ.ಎ.ಕಾಕರ, ಚೆನ್ನಪ್ಪ ಬಳ್ಳೊಳ್ಳಿ, ಮಹಾಂತೇಶ ಮದ್ದಿನ, ಗಿರೀಶ್ ತಿಪ್ಪಣ್ಣನವರ, ಸಿ.ಬಿ.ಜನಗಣ್ಣನವರ ಕಾರ್ಯಾಚರಣೆಯಲ್ಲಿ ಭಾಗವಹಿಸಿದ್ದರು.