Monday, December 23, 2024
spot_img
Homeಕ್ರೈಂಉಗುರಿನಲ್ಲಿ ಹೋಗಬಹುದಾಗಿದ್ದ ಕೆಲಸಕ್ಕೆ ಕೊಡಲಿ ತೆಗೆದುಕೊಂಡ ಕಾರಣ ದರ್ಶನ್ ಇಂದು ಜೈಲು ಸೇರಿದ್ದಾರೆ: ಕಾಳಿ ಉಪಾಸಕಿ...

ಉಗುರಿನಲ್ಲಿ ಹೋಗಬಹುದಾಗಿದ್ದ ಕೆಲಸಕ್ಕೆ ಕೊಡಲಿ ತೆಗೆದುಕೊಂಡ ಕಾರಣ ದರ್ಶನ್ ಇಂದು ಜೈಲು ಸೇರಿದ್ದಾರೆ: ಕಾಳಿ ಉಪಾಸಕಿ ಚಂದಾ ಪಾಂಡೆ..!!

ಉಗುರಿನಲ್ಲಿ ಹೋಗಬಹುದಾಗಿದ್ದ ಕೆಲಸಕ್ಕೆ ಕೊಡಲಿ ತೆಗೆದುಕೊಂಡ ಕಾರಣ ದರ್ಶನ್ ಇಂದು ಜೈಲು ಸೇರಿದ್ದಾರೆ. ದರ್ಶನ್​ರ ಈ ಸ್ಥಿತಿಗೆ ಅವರಿಗಿದ್ದ ಗಂಡಾಂತರವೇ ಕಾರಣ ಎಂದಿರುವ ಕಾಳಿ ಉಪಾಸಕಿ ಚಂದಾ ಪಾಂಡೆ, ಈ ಹಿಂದೆ ನಾನು ದರ್ಶನ್​ಗೆ ಎಚ್ಚರಿಕೆ ಹೇಳಿದ್ದೆ, ಆದರೆ ಈ ಬಾರಿ ಎಚ್ಚರಿಕೆ ಹೇಳಲು ಸಾಧ್ಯವಾಗಲಿಲ್ಲ. ಅದಕ್ಕೆ ಅವರೇ ಕಾರಣ ಎಂದಿದ್ದಾರೆ.

ರೇಣುಕಾ ಸ್ವಾಮಿ ಕೊಲೆ ಪ್ರಕರಣದಲ್ಲಿ ಆರೋಪಿಯಾಗಿ ನಟ ದರ್ಶನ್ ಜೈಲು ಸೇರಿದ್ದಾರೆ. ಉಗುರಿನಲ್ಲಿ ಹೋಗಬಹುದಾಗಿದ್ದ ಪ್ರಕರಣಕ್ಕೆ ಕೊಡಲಿ ಎತ್ತುಕೊಂಡು ಈಗ ಪಶ್ಚಾತ್ತಾಪ ಪಡುತ್ತಿದ್ದಾರೆ. ದರ್ಶನ್ ಜೈಲು ಸೇರಿದ ಬಳಿಕ ಅವರ ವ್ಯಕ್ತಿತ್ವದ ಬಗ್ಗೆ ಸಾಕಷ್ಟು ವಿಶ್ಲೇಷಣೆಗಳು ಹಲವರಿಂದ ನಡೆಯುತ್ತಿದೆ. ಇದರ ಜೊತೆಗೆ ಕೆಲವರು ದರ್ಶನ್​ರ ಜಾತಕ ವಿಶ್ಲೇಷಣೆಯನ್ನೂ ಸಹ ಮಾಡಿದ್ದಾರೆ. ಇದೀಗ ಕಾಳಿ ಉಪಾಸಕಿ ಚಂದಾ ಪಾಂಡೇ ಅಮ್ಮಾಜಿ ಅವರು ದರ್ಶನ್​ಗೆ ಈ ಸಂಕಷ್ಟ ಎದುರಾಗಲು ಅವರ ತಲೆ ಗೂದಲಿನಿಂದ ಹಿಡಿದು ಹಲವು ಕಾರಣಗಳಿವೆ ಎಂದಿದ್ದು, ಅವುಗಳ ಬಗ್ಗೆ ಮಾಹಿತಿ ನೀಡಿದ್ದಾರೆ.

News88 ಜೊತೆಗೆ ಮಾತನಾಡಿರುವ ಚಂದಾ ಪಾಂಡೆ, ‘2018ಕ್ಕೂ ಮುಂಚೆ ದರ್ಶನ್ ಗೆಳೆಯ ಹೇಮಂತ್ ಎಂಬುವರು ನಮ್ಮ ಮನೆಗೆ ಬರುತ್ತಿದ್ದರು. ದರ್ಶನ್, ದಸರಾ ಕಾರ್ ರೇಸ್​ನಲ್ಲಿ ಭಾಗವಹಿಸುತ್ತಿರುವುದಾಗಿ ಹೇಳಿದ್ದರು. ಆದರೆ ನಾನು ಬೇಡ, ದರ್ಶನ್​ಗೆ ಕಂಟಕ ಇದೆ. ರೇಸ್​ಗೆ ಹೋದರೆ ಮರಳಿ ಬರುವುದಿಲ್ಲ ಅದನ್ನು ತಪ್ಪಿಸು ಎಂದಿದ್ದೆ. ಹಾಗೆಯೇ ಆತ ಅದನ್ನು ತಪ್ಪಿಸಿದ. ಆದರೆ ಅದಾದ ಸ್ವಲ್ಪ ದಿನಕ್ಕೆ ದರ್ಶನ್​ಗೆ ಕಾರು ಅಪಘಾತವಾಗಿ ಕೈಗೆ ಪೆಟ್ಟಾಯ್ತು. ಆ ಘಟನೆ ಆದ ಬಳಿಕ ದರ್ಶನ್ ನನ್ನ ಬಂದು ಭೇಟಿ ಆಗಿ ಆಶೀರ್ವಾದ ಪಡೆದರು. ನಾನು ಕೆಲವು ಸಲಹೆಗಳನ್ನು ಆಗಲೇ ನೀಡಿದ್ದೆ. ಕೆಲವು ದೊಡ್ಡ ಗಂಡಾಂತರ ಮುಂದಿದೆ ಎಂದು ಸಹ ಹೇಳಿದ್ದೆ’ ಎಂದಿದ್ದಾರೆ.

ಆದರೆ ದರ್ಶನ್ ಬಂದ ಸಮಯದಲ್ಲಿ ಅವರೊಟ್ಟಿಗೆ ನನ್ನ ಫೋಟೊ ವೈರಲ್ ಆಯ್ತು. ಆದರೆ ಆ ಫೋಟೊವನ್ನು ಇಟ್ಟುಕೊಂಡು ನಾನು ಪ್ರಚಾರ ಪಡೆಯುತ್ತಿದ್ದೇನೆ ಎಂದು ದರ್ಶನ್ ಗೆ ಅನಿಸಿ, ಮನಸ್ತಾಪ ಮೂಡಿತು. ಅಸಲಿಗೆ ಆ ಫೋಟೊ ಅನ್ನು ದರ್ಶನ್​ರ ಸಂಘದ ಅಧ್ಯಕ್ಷನೊಬ್ಬ ವೈರಲ್ ಮಾಡಿದ್ದ. ಮನಸ್ತಾಪದ ಬಳಿಕ ದರ್ಶನ್ ನನ್ನನ್ನು ಸಂಪರ್ಕಿಸಲಿಲ್ಲ, ನಾನು ಸಹ ದರ್ಶನ್ ಅನ್ನು ಸಂಪರ್ಮಿಸಲಿಲ್ಲ. ಆದರೆ ದರ್ಶನ್​ಗೆ ಯಾವಾಗ ಎರಡನೇ ಬಾರಿ ಕೈಗೆ ಪೆಟ್ಟಾಯ್ತೋ ಆಗ ನನಗೆ ದರ್ಶನ್​ಗಿರುವ ಗಂಡಾಂತರ ನೆನಪಿಗೆ ಬಂತು. ಆದರೆ ನನ್ನ ಸಂಪರ್ಕದಲ್ಲಿ ದರ್ಶನ್ ಇಲ್ಲದ ಕಾರಣ ನಾನು ಅವರಿಗೆ ಏನನ್ನೂ ಹೇಳಲು ಹೋಗಲಿಲ್ಲ’ ಎಂದಿದ್ದಾರೆ.

ಮೊದಲ ಭಾರಿ ದರ್ಶನ್​ಗೆ ಕೈ ಮುರಿದಾಗ ಶನಿ ಭುಕ್ತಿ ನಡೆಯುತ್ತಿತ್ತು, ಏಳು ವರ್ಷಗಳ ಒಳಗೆ ಮತ್ತೆ ಕೈ ಮುರಿದಿದೆ ಹಾಗಾಗಿ ಮತ್ತೆ ಶನಿಯ ಸಮಸ್ಯೆಯೇ ಅವರನ್ನು ಕಾಡಿದೆ. ಮೂಳೆ ಮುರಿಯುವುದು ಶನಿಯ ಪ್ರಭಾವದ ಮುನ್ಸೂಚನೆ. ಇದರ ಜೊತೆಗೆ ಅವರು ಇದೇ ಸಂದರ್ಭದಲ್ಲಿ ತಲೆ ಕೂದಲಿಗೆ ಏನೋ ಮಾಡಿಸಿಕೊಂಡರು. ಕೂದಲನ್ನು ಶನಿಯೊಟ್ಟಿಗೆ ಹೋಲಿಸುತ್ತೀವಿ. ಹೀಗಿರುವಾಗ ಅವರು ಕೂದಲು ಶೈಲಿ ಬದಲಾಯಿಸಿಕೊಂಡಿದ್ದು ಸಹ ಗಂಡಾಂತರದ ಮುನ್ಸೂಚನೆಯೇ. ಅವರು ಕೂದಲೂ ಕಸಿ ಮಾಡಿಸಿಕೊಳ್ಳದೇ ಇದ್ದಿದ್ದರೆ ಈ ಪ್ರಕರಣ ಖಂಡಿತ ಆಗುತ್ತಿರಲಿಲ್ಲ ಎಂದಿದ್ದಾರೆ ಚಂದಾ ಪಾಂಡೆ. ಅಲ್ಲದೆ, ದರ್ಶನ್ ನಟಿಸುತ್ತಿದ್ದ ಸಿನಿಮಾ ಹೆಸರು ‘ಡೆವಿಲ್’ ಎಂದಿದ್ದು ಅದರ ಪರಿಣಾಮವೂ ಸಹ ದರ್ಶನ್​ ಮೇಲೆ ಆಗಿದೆ’ ಎಂದಿದ್ದಾರೆ.

RELATED ARTICLES

LEAVE A REPLY

Please enter your comment!
Please enter your name here

- Advertisment -spot_img

Most Popular

Recent Comments