ಮುಂಡಗೋಡ : ತಾಲೂಕಿನ ಹುನಗುಂದ ಗ್ರಾಮ ಸನಿಹದ ದೋರ್ಜಿ ಎಂಬ ಟಿಬೇಟಿಯನ್ ವ್ಯಕ್ತಿ ಕಲಿಯುಗದ ಧರ್ಮರಾಯ ದೋರ್ಜಿ ಹೌದು ಉತ್ತರ ಕನ್ನಡ ಜಿಲ್ಲೆಯ ಮುಂಡಗೋಡು ತಾಲೂಕಿನ ದೋರ್ಜಿ ಎಂಬ ಟಿಬೇಟಿಯನ್ ದೇವರು ಮೆಚ್ಚುವ ಕೆಲಸ ಮಾಡುತ್ತಿದ್ದಾರೆ. ಇವರು ತಮ್ಮ ಸ್ವಂತ ಜಾಗದಲ್ಲಿ 5,00,000 ರೂಪಾಯಿ ವೆಚ್ಚದಲ್ಲಿ ಶೆಡ್ಡುಗಳನ್ನು ನಿರ್ಮಿಸಿ ಅನಾಥ ನಾಯಿ, ಬೆಕ್ಕು, ಆಕಳಿಗೆ ಆಶ್ರಯ ನೀಡಿದ್ದಾರೆ.
ಇವರ ಬಗ್ಗೆ ಮಾಹಿತಿ ಇಲ್ಲಿದೆ ನೋಡಿ.ದೋರ್ಜಿ 50 ವರ್ಷದ ಟಿಬೇಟಿಯನ್ ವ್ಯಕ್ತಿ ಈತ ಮೊದಲು ಬೌದ್ಧ ಸನ್ಯಾಸಿಯಾಗಿದ್ದರು. 2006 ರಲ್ಲಿ ಇವರು ತಮ್ಮ ಪ್ರಾಣಿ ಪಾಲನೆಯನ್ನು ಶುರು ಮಾಡಿದರು, ನಂತರ 2016 ರಲ್ಲಿ ಸನ್ಯಾಸ ಬಿಟ್ಟು ತಮ್ಮ ಸಂಪೂರ್ಣ ಜೀವನವನ್ನು ನಾಯಿಗಳ ರಕ್ಷಣೆಗೆ ಮೀಸಲಿಟ್ಟಿದ್ದಾರೆ.
ಮೂಕಪ್ರಾಣಿಗಳಿಗೆ ಮನುಷ್ಯರಂತೆ ಮಾತನಾಡಲು ಬರುವುದಿಲ್ಲ. ಎಷ್ಟೋ ನಾಯಿಗಳು ಅಪಘಾತದಲ್ಲಿ ಗಾಯಗೊಂಡು ನರಳಾಡಿ ಸಾಯುತ್ತವೆ. ಅಂತಹ ನಾಯಿಗಳಿಗೆ ರಕ್ಷಣೆ ಹಾಗು ಆಶ್ರಯ ನೀಡುವ ಕೆಲಸ ಮಾಡುತ್ತಿದ್ದೇನೆ ದೋರ್ಜೆ
ರೋಡ್ ಆಕ್ಸಿಡೆಂಟ್ ನಲ್ಲೋ ಅಥವಾ ಅನಾಥವಾಗಿ ರಸ್ತೆ ಮೇಲೆ ಬಿದ್ದಿರುವ ನಾಯಿಗಳನ್ನು ಎತ್ತಿಕೊಂಡು ಬರುವ ದೋರ್ಜಿ ಸ್ಥಳೀಯ ಸರ್ಕಾರಿ ಡಾಕ್ಟರುಗಳ ಬಳಿ ಚಿಕಿತ್ಸೆ ಕೊಡಿಸಿ ತಾವೇ ಅದರ ಹೊಣೆ ಹೊತ್ತು ಸಾಕುತ್ತಾರೆ. ಈವರೆಗೆ 250 ನಾಯಿ, 15 ಬೆಕ್ಕು, 6 ಆಕಳನ್ನು ಇವರು ಹೊಂದಿದ್ದು, ಅದರ ಲಾಲನೆ ಪಾಲನೆಯನ್ನು ತನ್ನ ಟೂರಿಂಗ್ ವೆಹಿಕಲ್ ನ ಆದಾಯ ಹಾಗೆಯೇ ಆಟೋ ಆದಾಯದೊಂದಿಗೆ ಗಮನಿಸುತ್ತಾರೆ. ಹಲವಾರು ಜನ ಇವರ ಕಾರ್ಯ ಮೆಚ್ಚಿ ಡೋನೇಶನ್ ಅನ್ನು ಸಹ ನೀಡಿದ್ದಾರೆ.
ನಾಯಿಗಳನ್ನು ಕಂಡು ಅವುಗಳಿಗೆ ಆಗಾಗ ಆಹಾರ ಹಾಕುತ್ತಿದ್ದರು. ದಿನಗಳು ಕಳೆದಂತೆ ನಾಯಿಗಳ ಮೇಲೆ ಹೆಚ್ಚಿನ ಪ್ರೀತಿ ಹೊಂದಿ ನಾಯಿಗಳಿಗೆ ಆಶ್ರಯ ನೀಡುವ ಧಾಮವನ್ನು ನಿರ್ಮಿಸಿದರು
ಪ್ರತೀ ದಿನ ಇವುಗಳಿಗೆ 50 ಕೆಜಿಯಷ್ಟು ಅನ್ನ ಹಾಗೂ ಇತ್ಯಾದಿ ತಿನಿಸುಗಳ ಖರ್ಚು ಬರುತ್ತದೆ. ಒಂದು ಟೆಂಪೋ, ಒಂದು ಆಟೋ ಹೊಂದಿದ್ದು, ಅದನ್ನು ಬಾಡಿಗೆಗೆ ಓಡಿಸುತ್ತಾರೆ. ಬಾಡಿಗೆಯಿಂದ ಬಂದ ಹಣವನ್ನು ಸಹ ನಾಯಿಗಳ ಸಾಕಾಣಿಕೆಗೆ ವ್ಯಯ ಮಾಡುತ್ತಿದ್ದಾರೆ ಎನ್ನಲಾಗಿದೆ. ಹಾಗೆಯೇ ಚೂರು ಭೂಮಿಯನ್ನು ಹೊಂದಿರುವ ದೋರ್ಜಿಗೆ ಆಗಾಗ ಕೆಲವರ ಸಹಾಯಹಸ್ತದ ಅಗತ್ಯತೆ ಕೂಡ ಇದೆ.ಡೋಗ್ಲಿಂಗ್ ಕರ್ನಾಟಕ ಎನಿಮಲ್ ಕೇರ್ ಟ್ರಸ್ಟ್ ಎಂದು ಮಾಡಿಕೊಂಡು ಈತನು ನಾಯಿ ಸಾಕುತ್ತಿದ್ದಾನೆ ಮುಂಡಗೋಡದಿಂದ ಹುನಗುಂದ ಮಾರ್ಗದಲ್ಲಿ ಬಂದರೆ ಈ ನಾಯಿಗಳ ಆಶ್ರಮಧಾಮ ನಿಮಗೆ ನೋಡಲು ಸಿಗುತ್ತದೆ. ಟಿಬೇಟಿಯನ್ ಕ್ಯಾಂಪ್ ನ ಪ್ರವಾಸದಲ್ಲಿರುವವರು ಇಲ್ಲಿ ಬಂದು ಹಾಗೆಯೇ ಕೈಲಾದ ಸಹಾಯ ಮಾಡಬಹುದು