Hubli:ಮಂಗಳವಾರದಂದು ಜಿಲ್ಲಾ ಕಾನೂನು ಸೇವೆಗಳ ಪ್ರಾಧಿಕಾರ ಧಾರವಾಡ ಜಿಲ್ಲಾಡಳಿತ ಜಿಲ್ಲಾ ಪಂಚಾಯತ್ ಜಿಲ್ಲಾ ಆರೋಗ್ಯ ಮತ್ತು ಕುಟುಂಬ ಕಲ್ಯಾಣ ಇಲಾಖೆ ಧಾರವಾಡ ಮಾನಸಿಕ ಆರೋಗ್ಯ ಮತ್ತು ನರವಿಜ್ಞಾನಗಳ ಸಂಸ್ಥೆ ಸ್ವಾಮಿ ವಿವೇಕಾನಂದ ಯೂಥ್ ಮೊಮೆಂಟ್ ಹಾಗೂ ಗ್ರಾಮ ಪಂಚಾಯಿತಿ ಸುಳ್ಳ ಗ್ರಾಮ ಹುಬ್ಬಳ್ಳಿ ತಾಲೂಕು ಇವರ ಸಯುಕ್ತಾಕ್ಷರದಲ್ಲಿ ಕಾನೂನು ಅರಿವು ನೆರವು ಕಾರ್ಯಕ್ರಮ ಮತ್ತು ಆರೋಗ್ಯ ಜಾಗೃತಿ ಹಾಗೂ ಉಚಿತ ಆರೋಗ್ಯ ತಪಾಸಣಾ ಶಿಬಿರವನ್ನು ಏರ್ಪಡಿಸಲಾಗಿತ್ತು
ಕಾರ್ಯಕ್ರಮವನ್ನು ಶ್ರೀ ಪರಶುರಾಮ್ ಎಫ್ ದೊಡ್ಮನಿ ಗೌರವಾನ್ವಿತ ಹಿರಿಯ ಸಿವಿಲ್ ನ್ಯಾಯಾಧೀಶರು ಹಾಗೂ ಸದಸ್ಯ ಕಾರ್ಯದರ್ಶಿಗಳು, ಜಿಲ್ಲಾ ಕಾನೂನು ಸೇವೆಗಳ ಪ್ರಾಧಿಕಾರ ಧಾರವಾಡ ಉದ್ಘಾಟಿಸುವುದರ ಮೂಲಕ ಕಾರ್ಯಕ್ರಮವನ್ನು ನೆರವೇರಿಸಿದರು ಕಾರ್ಯಕ್ರಮದ ಕಾರ್ಯಕ್ರಮದ ಅಧ್ಯಕ್ಷತೆಯನ್ನು ಶಿವಕಲಪ್ಪ ದೇಮಕ್ನವರ್ ನವರ ಅಧ್ಯಕ್ಷರು ಗ್ರಾಮ ಪಂಚಾಯಿತಿ ಸುಳ್ಳ ಮುಖ್ಯ ಅತಿಥಿಗಳಾಗಿ ಡಾ. ಪಾಟೀಲ್ ಶಶಿ ಜಿಲ್ಲಾ ಆರೋಗ್ಯ ಅಧಿಕಾರಿ ಜಿಲ್ಲಾ ಆರೋಗ್ಯ ಮತ್ತು ಕುಟುಂಬ ಕಲ್ಯಾಣ ಇಲಾಖೆ ಧಾರವಾಡ ಹಾಗೂ ಶ್ರೀ ಪ್ರಕಾಶ್ ಎಂ ನಾಸಿ ತಹಶೀಲ್ದಾರ್ ಹುಬ್ಬಳ್ಳಿ ತಾಲೂಕು ಗ್ರಾಮೀಣ ಡಾಕ್ಟರ್ ಅರುಣ್ ಕುಮಾರ್ ಸಿ ನಿರ್ದೇಶಕರು ಡಿಮ್ಹಾನ್ಸ್ ಧಾರವಾಡ ಶ್ರೀ ಉಮೇಶ್ ಬೊಮ್ಮಕ್ಕನವರ್ ಕ್ಷೇತ್ರ ಶಿಕ್ಷಣಾಧಿಕಾರಿ ಹಾಗೂ ಕಾರ್ಯನಿರ್ವಾಹಕ ಅಧಿಕಾರಿಗಳು ತಾಲೂಕ್ ಪಂಚಾಯತ್ ಹುಬ್ಬಳ್ಳಿ ಗ್ರಾಮೀಣ ಡಾ. ಸುಧೀಂದ್ರ ಹುದ್ದಾರ್ ಸಹಾಯಕ ಪ್ರಾಧ್ಯಾಪಕರು ಟೆಲಿಮಾನಸ್ ಡಿಮ್ಹಾನ್ಸ್ ಧಾರವಾಡ ಆಗಮಿಸಿದ್ದರು ಜೊತೆಗೆ ಡಾಕ್ಟರ್ ರೆಬೇಕಾ ಹೊಂಬಾಳ ವೈದ್ಯಾಧಿಕಾರಿಗಳು ಪ್ರಾಥಮಿಕ ಆರೋಗ್ಯ ಕೇಂದ್ರ ಬ್ಯಾಹಟ್ಟಿ ಹಾಗೂ ಶ್ರೀಮತಿ ವನಜಾಕ್ಷಿ ಬಿ ಹೊಸೂರ್ ಪಂಚಾಯತ್ ಅಭಿವೃದ್ಧಿ ಅಧಿಕಾರಿಗಳು ಸುಳ್ಳ ಇವರು ಕೂಡ ಉಪಸ್ಥಿತರಿದ್ದರು
ಕಾರ್ಯಕ್ರಮದಲ್ಲಿ ಸಾರ್ವಜನಿಕರಿಗೆ ಜಿಲ್ಲಾ ಕಾನೂನು ಸೇವೆಗಳ ಪ್ರಾಧಿಕಾರದ ದೇಯೋ ದ್ದೇಶಗಳು ಹಾಗೂ ಪೋಕ್ಸೋ ಕಾಯ್ದೆಯ ಕುರಿತು ಜೊತೆಗೆ ಆತ್ಮಹತ್ಯ ತಡೆಗಟ್ಟುವಿಕೆ ಹಾಗೂ ಮಾನಸಿಕ ಆರೋಗ್ಯದ ಸುರಕ್ಷತೆ ಮಾದಕ ವಸ್ತುಗಳ ಸೇವನೆಯಿಂದಾಗುವ ದುಷ್ಪರಿಣಾಮಗಳ ತಡೆಗಟ್ಟುವಿಕೆ ಹಾಗೂ ಚಿಕಿತ್ಸಾ ಪದ್ಧತಿಗಳು ಮನೆ ಆಧಾರಿತ ಉಪಶಮನ ಆರೈಕೆ ಮತ್ತು ನಿಮಾನ್ಸ್ ಸಂಸ್ಥೆಯ ಕುರಿತ ಸೌಲಭ್ಯಗಳ ಮಾಹಿತಿಯನ್ನು ಗಣ್ಯಾತಿ ಗಣ್ಯರು ವಿಶ್ಲೇಷಣಾತ್ಮಕವಾಗಿ ಮಾಹಿತಿಯನ್ನು ನೀಡಿದರು ಕಾರ್ಯಕ್ರಮದಲ್ಲಿ ಸುಳ್ಳು ಗ್ರಾಮದ ಶಾಲಾ ಮಕ್ಕಳು ಸಾರ್ವಜನಿಕರು ಆಶಾ ಕಾರ್ಯಕರ್ತೆಯರು ಅಂಗನವಾಡಿ ಶಿಕ್ಷಕರು ಶಾಲಾ ಶಿಕ್ಷಕರು ಸುಳ್ಳ ಗ್ರಾಮದ ಗುರು ಹಿರಿಯರು ಹಾಗೂ ವಿವಿಧ ಸಂಘ ಸಂಸ್ಥೆಗಳ ಮುಖ್ಯಸ್ಥರು ಉಪಸ್ಥಿತರಿದ್ದರು