ಹುಬ್ಬಳ್ಳಿ: ತಾಯಿ ನಿಧನರಾದರೂ ಪೊಲೀಸ್ ಸಿಬ್ಬಂದಿಯೊರ್ವರು ಕೆಲಸಕ್ಕೆ ಹಾಜರಾಗಿ ಕರ್ತವ್ಯ ಪ್ರಜ್ಞೆಮೆರೆದಿದ್ದಾರೆ. ಈ ಘಟನೆಗೆ ಹುಬ್ಬಳ್ಳಿ ಸಾಕ್ಷಿಯಾಗಿದೆ.
ಹೌದು, ಹು-ಧಾ ಪೋಲಿಸ್ ಕಮಿಷನರ್ ವ್ಯಾಪ್ತಿಯಲ್ಲಿ ಡಿಸಿಪಿ (ಸಿಎಆರ್) ಆಗಿ ಕರ್ತವ್ಯ ನಿರ್ವಹಿಸುತ್ತಿರುವ ಯಲ್ಲಪ್ಪ ಕಾಶಪ್ಪನವರ ಅವರ ತಾಯಿ ವಯೋ ಸಹಜ ಕಾಯಿಲೆಯಿಂದ ಇಂದು ಬೆಳಗಿನ ಜಾವ ಮೃತಪಟ್ಟಿದ್ದಾರೆ.
ಈ ವಿಷಯ ಗೊತ್ತಾಗಿ ದೂರದ ಸವದತ್ತಿಗೆ ತೆರಳಿ ತಾಯಿಯ ಅಂತ್ಯಕ್ರಿಯೆ ನಡೆಸಿದ ಯಲ್ಲಪ್ಪ ಅವರು ಮರಳಿ ಕರ್ತವ್ಯಕ್ಕೆ ಹಾಜರಾಗಿದ್ದಾರೆ.
ತಾಯಿಯ ಅಗಲಿಕೆಯ ನೋವಿನಲ್ಲೂ ಚುನಾವಣಾ ಕರ್ತವ್ಯಕ್ಕೆ ಹಾಜರಾದ ಅಶೋಕ ಅವರ ಕಾರ್ಯಕ್ಕೆ ಹಿರಿಯ ಅಧಿಕಾರಿಗಳು ಮೆಚ್ಚುಗೆ ಸೂಚಿಸಿದ್ದಾರೆ.
ಇನ್ನು ಪೊಲೀಸ್ ಇಲಾಖೆ ರಜೆ ಮಂಜೂರು ಮಾಡಿದ್ದರೂ ಸಹ ಕರ್ತವ್ಯಕ್ಕೆ ಹಾಜರಾದ ಯಲ್ಲಪ್ಪ ಅವರ ಕಾರ್ಯವನ್ನು ಇತರ ಪೋಲಿಸರು ಪ್ರಶಂಸಿದ್ದಾರೆ. ಅಷ್ಟೇ ಅಲ್ಲದೇ ಸ್ವತಃ ಪೋಲಿಸ್ ಆಯುಕ್ತರಾದ ರೇಣುಕಾ ಸುಕುಮಾರ ಅವರು, ನಿನ್ನೆ ದಿನ ನಮ್ಮ ಪೊಲೀಸ್ ಕಾನ್ಸ್ಟೇಬಲ್ ಅವರ ತಾಯಿ ನಿಧನರಾಗಿದ್ದರು. ಆದರೆ ಇಂದು ಅವರು ದುಃಖದ ನಡುವೆಯೂ ಕರ್ತವ್ಯಕ್ಕೆ ಹಾಜರಾಗಿದ್ದಾರೆ. ಅವರ ಕರ್ತವ್ಯ ನಿಷ್ಠೆ, ಪ್ರಮಾಣಿಕೆತೆಗೆ ತುಂಬು ಹೃದಯದಿಂತ ಶುಭ ಕೋರುತ್ತೇವೆ. ಅವರ ಕಾರ್ಯ ಮತ್ತೊಬ್ಬರಿಗೆ ಮಾದರಿ ಎಂದು ತಿಳಿಸಿದ್ದಾರೆ.