Friday, December 20, 2024
spot_img
Homeಕ್ರೈಂಹುಬ್ಬಳ್ಳಿಯಲ್ಲಿ "ಮಹಮ್ಮದ್ ಅಂಕಲಗಿ" ಬಂಧನ!!! ಸಿಸಿಬಿ ಪೋಲಿಸ್ ಕಾರ್ಯಚರಣೆಗೆ ಕಮೀಷನರ್ ರೇಣುಕಾ ಸುಕುಮಾರ ಮೆಚ್ಚುಗೆ!!*

ಹುಬ್ಬಳ್ಳಿಯಲ್ಲಿ “ಮಹಮ್ಮದ್ ಅಂಕಲಗಿ” ಬಂಧನ!!! ಸಿಸಿಬಿ ಪೋಲಿಸ್ ಕಾರ್ಯಚರಣೆಗೆ ಕಮೀಷನರ್ ರೇಣುಕಾ ಸುಕುಮಾರ ಮೆಚ್ಚುಗೆ!!*

 

ಹುಬ್ಬಳ್ಳಿ: ಅಕ್ರಮವಾಗಿ ಗಾಂಜಾ ಮಾರಾಟ ಮಾಡಲು ಯತ್ನಿಸುತ್ತಿದ್ದ ಆರೋಪಿಯನ್ನು ಬಂಧನ ಮಾಡುವಲ್ಲಿ ಹುಬ್ಬಳ್ಳಿ ಸಿಸಿಬಿ ಪೋಲಿಸರು ಯಶಸ್ವಿಯಾಗಿದ್ದಾರೆ.

ನಗರದ ರೇಲ್ವೆ ಸ್ಟೇಶನ್ ಬಳಿಯಲ್ಲಿ ಆರೋಪಿ ಮಹಮ್ಮದ್ ಆಸೀಪ್‌ ಅಂಕಲಗಿ ಎಂಬಾತ ಗಾಂಜಾ ಮಾರಾಟ ಮಾಡುತ್ತಿದ್ದ ಖಚಿತ ಮಾಹಿತಿ ಮೇರೆಗೆ ಸಿಸಿಬಿ ಎಸಿಪಿ ಎಸ್.ಪಿ. ಒಡೆಯರ್ ಮಾರ್ಗದರ್ಶನದಲ್ಲಿ ಇನ್ಸ್ಪೆಕ್ಟರ್ ಸಿಮಾಣಿ, ನೇತೃತ್ವದಲ್ಲಿ ದಾಳಿ ನಡೆಸಿ ಆರೋಪಿಯನ್ನು ಬಂಧನ ಮಾಡಿದ್ದಾರೆ.

ಇನ್ನೂ ದಾಳಿ ಕಾಲಕ್ಕೆ ಆರೋಪಿಯಿಂದ 800 ಗ್ರಾಂ ಗಾಂಜಾ ವಶಕ್ಕೆ ಪಡೆದು, ಈ ಕುರಿತು ಹುಬ್ಬಳ್ಳಿಯ ಶಹರ ಪೋಲಿಸ್ ಠಾಣೆಯಲ್ಲಿ ಪ್ರಕರಣ ದಾಖಲಿಸಿದ್ದಾರೆ.

ಈ ಕಾರ್ಯಚರಣೆಯಲ್ಲಿ ಎಎಸ್ಐ ಬಿ.ಎಮ್ ಲಂಗೋಟಿ, ಸಿಬ್ಬಂದಿಗಳಾದ ಧಾರವಾಡ, ಅನಿಲ ಹುಗ್ಗಿ, ರಾಜು ಗುಂಜ್ಯಾಳ, ಎಫ್ ಬಿ ಕುರಿ, ಎಸ್.ಐ ಕಡೇಮನಿ ಸೇರಿದಂತೆ ಸಿಬ್ಬಂದಿ ಇದ್ದಾರೆ. ಪೋಲಿಸರ ಕಾರ್ಯಕ್ಕೆ ಹುಬ್ಬಳ್ಳಿ-ಧಾರವಾಡ ಪೋಲಿಸ್ ಆಯುಕ್ತರಾದ ರೇಣುಕಾ ಸುಕುಮಾರ ಶ್ಲಾಘನೆ ವ್ಯಕ್ತಪಡಿಸಿದ್ದಾರೆ.

RELATED ARTICLES

LEAVE A REPLY

Please enter your comment!
Please enter your name here

- Advertisment -spot_img

Most Popular

Recent Comments