ರಂಜಾನ್ ಹಿನ್ನೆಲೆ ಅಪ್ಪನ ಜತೆಗೆ ನಮಾಜ್’ಗೆ ಹೋಗಿದ್ದ ಥೈಮುರ್
ಬ್ಯಾಡಗಿ: ನಮಾಜ್ ಮಾಡಲು ಮಸೀದಿಗೆ ಅಪ್ಪನ ಜೊತೆಗೆ ಹೋಗಿದ್ದ ಬಾಲಕನೊರ್ವ ಕಾಣೆಯಾಗಿರುವ ಘಟನೆ ಬ್ಯಾಡಗಿಯಲ್ಲಿ ಜರುಗಿದೆ.
ಇಲ್ಲಿನ ಇಸ್ಲಾಂಪುರ ಓಣಿಯ ಥೈಮುರ್ ಮುಸ್ತು ಬೆಳಗಾವಿ (03) ಕಾಣೆಯಾದ ಬಾಲಕನಾಗಿದ್ದು, ಈತ ರಂಜಾನ್ ಹಿನ್ನೆಲೆಯಲ್ಲಿ ಅಪ್ಪನ ಜೊತೆಗೆ ಏ.03 ರಂದು ನಮಾಜ್ ಮಾಡಲು ಮಸೀದಿಗೆ ಹೋದ ಸಂದರ್ಭದಲ್ಲಿ ಎಲ್ಲಿಗೋ ಹೋಗಿ ಕಾಣೆಯಾಗಿದ್ದಾನೆ. ಈ ಬಾಲಕ ಎಲ್ಲಿಯಾದರೂ ಕಂಡಲ್ಲಿ ದೂರವಾಣಿ ಸಂಖ್ಯೆ 9980603766, 7019934733 ಗೆ ಸಂಪರ್ಕ ಮಾಡಲು ಕಾಣೆಯಾದ ಬಾಲಕನ ಪೋಷಕರು ಮನವಿ ಮಾಡಿದ್ದಾರೆ.