ಬೆಂಗಳೂರು : ಬೆಂಗಳೂರಿನಲ್ಲಿ ಡ್ರಿಂಕ್ ಅಂಡ್ ಡ್ರೈವ್ ವೇಳೆ ಯುವತಿ ಬಳಿ ಹಣ ವಸೂಲಿ ಆರೋಪ ಹಿನ್ನೆಲೆ ಜೀವನ ಭೀಮಾನಗರ ಠಾಣೆಯ ದುರಹಂಕಾರಿ ಲಂಚಕೋರ ಇನ್ಸ್ಪೆಕ್ಟರ್ ವೆಂಕಟಾಚಲಪತಿ ಸೇರಿ ನಾಲ್ವರು ಪೊಲೀಸರನ್ನು ಅಮಾನತ್ತು ಮಾಡಿದ್ದಾರೆ.
ಇನ್ಸ್ಪೆಕ್ಟರ್ ವೆಂಕಟಚಲಪತಿ, ಹೆಡ್ ಕಾನ್ ಸ್ಟೇಬಲ್ ಗಿರೀಶ್, ಹುಚ್ಚಸಾಬ್ ಕಡಿಮಣಿ, ಬಸವಪ್ಪ ಅವರು ಅಮಾನತುಗೊಂಡ ಪೊಲೀಸರಾಗಿದ್ದಾರೆ. ಕಳೆದ ಶನಿವಾರ ರಾತ್ರಿ ಡ್ರಿಂಕ್ ಅಂಡ್ ಡ್ರೈವ್ ತಪಾಸಣೆ ವೇಳೆ ಈ ಘಟನೆ ನಡೆದಿತ್ತು. ಕಾರ್ ನಲ್ಲಿ ತೆರಳುತ್ತಿದ್ದ ಮಹಿಳೆಯನ್ನ ಅಲ್ಕೋ ಮೀಟರ್ ಮೂಲಕ ತಪಾಸಣೆಗೊಳಪಡಿಸಿದ್ರು. ಮಹಿಳೆ ಮಧ್ಯ ಸೇವಿಸದಿದ್ದರೂ 15 ಸಾವಿರ ನೀಡುವಂತೆ ಪೊಲೀಸರು ಬೇಡಿಕೆ ಇಟ್ಟಿದ್ದರು.
ಹಾಗಾಗಿ ಘಟನೆ ಬಗ್ಗೆ ಯುವತಿ ತಂದೆ X ನಲ್ಲಿ ದೂರು ನೀಡಿದ್ರು, ಹಳೆ ಏರ್ ಪೋರ್ಟ್ ರಸ್ತೆಯಲ್ಲಿರುವ ಮಣಿಪಾಲ್ ಆಸ್ಪತ್ರೆಯ ಬಳಿ ಜೀವನ ಭೀಮಾ ನಗರ ಸಂಚಾರ ಪೊಲೀಸರಿಂದ ತಪಾಸಣೆ ನಡೆದಿತ್ತು. ಈ ವೇಳೆ ಯುವತಿ ಕುಡಿದಿಲ್ಲದಿದ್ರೂ ಸಂಚಾರ ಪೊಲೀಸರು ಹಣ ಕೇಳಿದ್ದಾರೆ. ಕ್ಯಾಶ್ ಇಲ್ಲವೆಂದಾಗ ಸ್ಥಳೀಯ ಪೆಂಟ್ರೋಲ್ ಬಂಕ್ ಗೆ ಹೋಗಿ ಅಲ್ಲಿನ ಸಿಬ್ಬಂದಿಗೆ ಹಣ ಆನ್ ಲೈನ್ ಟ್ರಾನ್ಸ್ಫರ್ ಮಾಡುವಂತೆ ಪೊಲೀಸರು ಹೇಳಿದ್ದಾರೆ. ಈ ವೇಳೆ ಪೆಂಟ್ರೋಲ್ ಬಂಕ್ ಸಿಬ್ಬಂದಿ ಹಣ ಸ್ವೀಕರಿಸಲು ನಿರಾಕರಿಸಿದ್ದು, ಬಳಿಕ ATM ಗೆ ಹೋಗಿ ಹಣ ಡ್ರಾ ಅಥವಾ ಗೂಗಲ್ ಪೇ ಮಾಡುವಂತೆ ಹೇಳಿದ್ದಾರೆ.
ಈ ಬಗ್ಗೆ ಪರಿಶೀಲನೆ ನಡೆಸುವಂತೆ ನಗರ ಪೊಲೀಸ್ ಆಯುಕ್ತರು ಎಸಿಪಿಗೆ ಸೂಚನೆ ಕೊಟ್ಟಿದ್ದಾರೆ. ಪೂರ್ವ ವಿಭಾಗ ಸಂಚಾರ ಡಿಸಿಪಿ, ನಗರ ಪೊಲೀಸ್ ಆಯುಕ್ತರಿಗೆ ವರದಿ ನೀಡಿದ್ರು, ಮೇಲ್ನೋಟಕ್ಕೆ ಕರ್ತವ್ಯ ಲೋಪ ಎಸಗಿರುವುದು ಕಂಡು ಬಂದಿದೆ.