ಹುಬ್ಬಳ್ಳಿ:ಇತ್ತೀಚಿನ ದಿನಗಳಲ್ಲಿ ಧಾರವಾಡ ಜಿಲ್ಲೆಯಲ್ಲಿ ಹೆಸರು ರಾಶಿ ಸುಗ್ಗಿ ಜೋರಾಗಿ ನಡೆಯುತ್ತಿದೆ ಕೇಂದ್ರ ಸರಕಾರ ಕೂಡ ಜಿಲ್ಲಾ ಟಾಸ್ಕ್ ಪೋರ್ಸ್ ಸಮಿತಿ ಸಭೆಯಲ್ಲಿ ಜಿಲ್ಲಾ ಟಾಸ್ಕ್ ಪೋರ್ಸ್ ಸಮಿತಿ ಅಧ್ಯಕ್ಷೆ,ಜಿಲ್ಲಾಧಿಕಾರಿ ದಿವ್ಯಾ ಪ್ರಭು 20 ಕಡೆ ಖರೀದಿ ಕೇಂದ್ರಗಳನ್ನು ಪ್ರಾರಂಭಿಸಿ ರೈತರಿಗೆ ನೇರವಾಗಿ ಹೆಸರು ಕಾಳು ಖರೀದಿ ಮಾಡುವಂತೆ ಸೂಚನೆ ನೀಡಿದ್ದಾರೆ.
ಆದರೆ ವಿಪರ್ಯಾಸವೆಂದರೆ ದಿನನಿತ್ಯ ಶಾಲೆಗೆ ಹೋಗುವ ಮಕ್ಕಳು ಎನ್ನದೆ ಕೆಲಸಕ್ಕೆ ಹೋಗುತ್ತಿರುವ ಮಹಿಳೆಯರು ಬೈಕ್ ಸವಾರರು ಎನ್ನದೆ ದೊಡ್ಡ ದೊಡ್ಡ ಯಂತ್ರಗಳು ಜನರಿಗೆ ಕಿರಿಕಿರಿ ಉಂಟು ಮಾಡುತಿದ್ದು, ಮನೆಯ ಸೂರು ಕೆಡವಿದ್ದು ಉಂಟು ಜೊತೆಗೆ ಯಂತ್ರ ಚಾಲಕರಿಗೆ ಹಳ್ಳಿಯಲ್ಲಿ ಸಣ್ಣ ಸಣ್ಣ ಮಕ್ಕಳು ಓಡಾಡುವಾಗ ಕೆಳಗೆ ಮಕ್ಕಳು ಕಾಣುವುದೇ ಇಲ್ಲ,ಮನೆಯ ಸೂರು ಕಾಣುವುದೇ ಇಲ್ಲ,ಕರೆಂಟ್ ವೈರ್ ಕಾಣುವುದೇ ಇಲ್ಲ.ಬೇಗ ಕಾಳುಗಳನ್ನ ಒಂದೆಡೆ ಮಾಡುವಲ್ಲಿ ಯಶಸ್ವೀ ಆಗುವುದು ಬಿಟ್ಟರೆ ಈ ಯಂತ್ರ ಉಪಕರಣದಿಂದ ಸಮಸ್ಯೆ ಉಂಟು ಮಾಡುವುದೇ ಹೆಚ್ಚು..
ಜೊತೆಗೆ ಹೊಲದಲ್ಲಿನ ಮಣ್ಣು ರಸ್ತೆಯ ಮೇಲೆ ತಂದು ಹಾಕಿ,ಮಷಿನ ಸ್ವಚ್ಛತೆಯೂ ಕೂಡ ದಿನನಿತ್ಯ ಸವಾರರು ಓಡಾಡುವ ರಸ್ತೆಯ ಮೇಲೆ ಹಾಕಿ ಸಾಕಷ್ಟು ಅಪಘಾತಕ್ಕೆ ಕಾರಣವಾಗಿದೆ.ರಸ್ತೆ ಮೇಲೆ ನಿಂತ ಮಣ್ಣಿನಿಂದ ರಾತ್ರಿ ವೇಳೆ ಬರುವ ಸವಾರರರಿಗೆ ಅಪಘಾತ ಉಂಟು ಮಾಡುತ್ತಿದ್ದೂ,ದಿನಕ್ಕೆ 5 ರಿಂದ 10 ಅಪಘಾತ ಆಗುತ್ತಿವೇ ಇಂತಹ ಯಮನ ರೀತಿಯ ಯಂತ್ರಗಳು ಪರಿಸರಕ್ಕೆ ಸಾರ್ವಜನಿಕರಿಗೆ ಕಿರಿಕಿರಿ ಉಂಟು ಮಾಡುತ್ತಿವೆ.
ಇಷ್ಟೆಲ್ಲ ಆದರೂ ಕೂಡ ಇಂತಹ ಯಮ ಸ್ವರೂಪ ಬಂದ ಯಂತ್ರಗಳನ್ನು ಪರಿಶೀಲಿಸಿ ಸಂಭಂದ ಪಟ್ಟ ಗ್ರಾಮ ಪಂಚಾಯತಿ ಅಧಿಕಾರಿಗಳು,ಅಧ್ಯಕ್ಷರು ಪೊಲೀಸ ಇಲಾಖೆ ಯಾವ ರೀತಿ ಕ್ರಮ ಕೈಗೊಳ್ಳುತ್ತದೆ ಎಂಬುದನ್ನ ಕಾದು ನೋಡಬೇಕಿದೆ.