ಉತ್ತರ ಪ್ರದೇಶ: ಬಾಡೂಟ ಮಾಡಿ ಹಾಕು ಎಂದು ಹೇಳಿದ ಪತಿಯ ತಲೆಗೆ ಇಟ್ಟಿಗೆಯಿಂದ ಹೊಡೆದು ಮೆದುಳು ಹೊರ ತೆಗೆದಿರುವ ಅಘಾತಕಾರಿ ಉತ್ತರ ಪ್ರದೇಶದಲ್ಲಿ ನಡೆದಿದೆ.
ಮಾಂಸದಡುಗೆ ಊಟ ಹಾಕು ಎಂದ ಪತಿಯ ತಲೆಗೆ ಇಟ್ಟಿಗೆಯಿಂದ ಹೊಡೆದ ಪತ್ನಿ ಬಳಿಕ ಆತನ ಮೆದುಳಿನ ಮಾಂಸವನ್ನೇ ಬಗೆದು ಹೊರತೆಗೆದಿರು ಆಘಾತಕಾರಿ ಘಟನೆ ಉತ್ತರ ಪ್ರದೇಶದ ಶಹಾಜಹಾನ್‌ಪುರದಲ್ಲಿ ನಡೆದಿದೆ. ಈ ಘಟನೆ ಸಿಸಿ ಕ್ಯಾಮರಾದಲ್ಲಿ ವೈರಲ್ ಆಗಿದ್ದು, ಭೀಭತ್ಸವಾಗಿದೆ. ಇಟ್ಟಿಗೆಯಿಂದ ತಲೆಗೆ ಹೊಡೆದು ಹೊಡೆದು ಮಹಿಳೆ ತನ್ನ ಗಂಡನನ್ನು ಕೊಂದೇ ಬಿಟ್ಟಿದ್ದಾಳೆ. ಗಂಡನ ತಲೆಯಿಂದ ಮಿದುಳು ಹೊರಗೆ ಬರುವವರೆಗೂ ಮಹಿಳೆ ಇಟ್ಟಿಗೆಯಿಂದ ಹೊಡೆದಿದ್ದಾಳೆ. ಬಳಿಕ ಗಂಡನ ದೇಹದ ಮೇಲೆ ಕುಳಿತು ಆತನ ತಲೆಯಿಂದ ಮಿದುಳು ಮಾಂಸವನ್ನು ಬಗೆದು ಹೊರಗೆ ತೆಗೆದಿದ್ದಾಳೆ. ನಾನು ಇವತ್ತು ನಿನ್ನ ತಲೆ ಹುಡಿ ಮಾಡುತ್ತೇನೆ ಎಂದು ಮಧ್ಯೆ ಮಧ್ಯೆ ಬೊಬ್ಬೆ ಹೊಡೆದು ಕಿರುಚುತ್ತಾ ಆಕೆ ಗಂಡನ ತಲೆ ಒಡೆದಿದ್ದಾಳೆ. ಕೂಡಲೇ ಘಟನಾ ಸ್ಥಳಕ್ಕೆ ಪೊಲೀಸರು ಆಗಮಿಸಿದ್ದು, ಮಹಿಳೆ ಮಾತ್ರ ಸುಮ್ಮನಿರದೇ ಪೊಲೀಸರ ಮುಂದೆಯೇ ಗಂಡನ ಮಿದುಳು ಬಗೆಯುವ ಕೃತ್ಯ ಮುಂದುವರೆಸಿದ್ದಾಳೆ.
ಶಹಾಜಹಾನ್‌ಪುರದ ರೋಜಾ ಪೊಲೀಸ್ ಠಾಣೆ ವ್ಯಾಪ್ತಿಯಲ್ಲಿ ಬರುವ ಗ್ರಾಮದಲ್ಲಿ ಈ ಆಘಾತಕಾರಿ ಘಟನೆ ನಡೆದಿದೆ. ಘಟನೆಗೆ ಸಂಬಂಧಿಸಿದಂತೆ ಪೊಲೀಸರು ಮಹಿಳೆಯನ್ನು ಬಂಧಿಸಿದ್ದಾರೆ. ಗಂಡ ಹೆಂಡತಿ ಬಳಿ ಮಾಂಸದಡುಗೆ ಮಾಡುವಂತೆ ಕೇಳಿದ್ದೇ ಈ ಘಟನೆಗೆ ಕಾರಣ ಎಂದು ತಿಳಿದು ಬಂದಿದೆ. ಹೀಗೆ ಹೆಂಡತಿಯಿಂದ ಭೀಕರವಾಗಿ ಕೊಲೆಯಾದ ವ್ಯಕ್ತಿಯನ್ನು 40 ವರ್ಷದ ಸತ್ಯಪಾಲ್ ಎಂದು ಗುರುತಿಸಲಾಗಿದೆ. ಹಾಗೆಯೇ ಕೊಲೆ ಮಾಡಿದ ಮಹಿಳೆಯನ್ನು 39 ವರ್ಷದ ಗಾಯತ್ರಿ ದೇವಿ ಎಂದು ಗುರುತಿಸಲಾಗಿದೆ. ಈ ದಂಪತಿ ತಮ್ಮಿಬ್ಬರು ಮಕ್ಕಳೊಂದಿಗೆ ಹಥುಡ ಗ್ರಾಮದಲ್ಲಿ ವಾಸ ಮಾಡುತ್ತಿದ್ದರು. ಸಸ್ಯಹಾರಿಯಾಗಿದ್ದು ಸತ್ಯಪಾಲ್‌ಗೆ ಮಾಂಸದಡುಗೆ ಎಂದರೆ ಪಂಚಪ್ರಾಣ, ಹೀಗಾಗಿ ಆತ ಆಗಾಗ ಮನೆಯಲ್ಲಿ ಮಾಂಸದಡುಗೆ ಮಾಡುವಂತೆ ಪತ್ನಿಯನ್ನು ಕೇಳುತ್ತಿದ್ದ. ಈ ಆಹಾರದಲ್ಲಿನ ವೈವಿಧ್ಯತೆಯ ಗಂಡ ಹೆಂಡತಿ ಮಧ್ಯೆ ಸದಾ ಜಗಳಕ್ಕೆ ಕಾರಣವಾಗಿತ್ತು. ಅಲ್ಲದೇ ಕೆಲವೊಮ್ಮೆ ಸತ್ಯಪಾಲ್ ಇದೇ ವಿಚಾರವಾಗಿ ಗಾಯತ್ರಿಯನ್ನು ಹೊಡೆಯುತ್ತಿದ್ದ. ಅದೇ ರೀತಿ ಘಟನೆ ನಡೆದ ದಿನವೂ ಕೂಡ ಸತ್ಯಪಾಲ್ ಮಾಂಸದೂಟಕ್ಕೆ ಬೇಡಿಕೆ ಇಟ್ಟಿದ್ದಾನೆ. ಆದರೆ ಇದಕ್ಕೆ ಗಾಯತ್ರಿ ಒಲ್ಲೆ ಎಂದಾಗ ಆತನಿಗೂ ಕೋಪ ಬಂದಿದ್ದು, ಇಬ್ಬರ ಮಧ್ಯೆ ಬಾರಿ ವಾಕ್ಸಮರ ನಡೆದ ಬಳಿಕ ಈ ಕೃತ್ಯ ಎಸೆಗಿದ್ದಾಳೆ.
ಈ ವಿಚಾರಕ್ಕೆ ಸಂಬಂಧಿಸಿದಂತೆ ಪೊಲೀಸರು ಆಕೆಯನ್ನು ಬಂಧಿಸಿ ವಿಚಾರಣೆ ನಡೆಸಿದಾಗ ಆಕೆ ತನ್ನ ಗಂಡ ತನಗೆ ನಿರಂತರವಾಗು ಹೊಡೆಯುತ್ತಿದ್ದ ಹಾಗೂ ಮಾಂಸದೂಟಕ್ಕೆ ಒತ್ತಾಯಿಸುತ್ತಿದ್ದ. ಘಟನೆ ನಡೆದಂದೂ ಕೂಡ ಮಾಂಸದಡುಗೆ ಮಾಡುವಂತೆ ಕೇಳಿದ್ದ. ಆದರೆ ಹಣವಿಲ್ಲದ ಕಾರಣ ನಾನು ಅದಕ್ಕೆ ನಿರಾಕರಿಸಿದೆ. ಇದೇ ವಿಚಾರ ಜಗಳಕ್ಕೆ ಕಾರಣವಾಯ್ತು. ತಾಳ್ಮೆ ಕಳೆದುಕೊಂಡು ಆತನನ್ನು ಕೊಂದು ಬಿಟ್ಟೆ ಎಂದು ಆಕೆ ಹೇಳಿದ್ದಾಳೆ. ಈ ರೀತಿ ಬೀಭತ್ಸವಾಗಿ ಕೊಲೆ ಮಾಡಿದ ಗಾಯತ್ರಿ ಈ ಹಿಂದೆ ಮಾನಸಿಕ ಅಸ್ವಸ್ಥತೆಗೆ ಒಳಗಾಗಿದ್ದಳು. ಬಳಿಕ ಗುಣಮುಖಳಾಗಿದ್ದಳು ಎಂದು ಆಕೆಯ ಫೋಷಕರು ಪೊಲೀಸರಿಗೆ ತಿಳಿಸಿದ್ದಾರೆ