Tuesday, December 17, 2024
spot_img
Homeಕ್ರೈಂಕಾರ್ಪೊರೇಟರ್ ಮಗಳು ನೇಹಾ ಹಿರೇಮಠ ಹತ್ಯೆ ಪ್ರಕರಣ; ನೇಹಾ ಹಾಗೂ ಫಯಾಜ್ ಇಬ್ಬರ ರೀಲ್ಸ್ ವೈರಲ್

ಕಾರ್ಪೊರೇಟರ್ ಮಗಳು ನೇಹಾ ಹಿರೇಮಠ ಹತ್ಯೆ ಪ್ರಕರಣ; ನೇಹಾ ಹಾಗೂ ಫಯಾಜ್ ಇಬ್ಬರ ರೀಲ್ಸ್ ವೈರಲ್

ಹುಬ್ಬಳ್ಳಿ: ಹುಬ್ಬಳ್ಳಿಯಲ್ಲಿ ಕಾರ್ಪೋರೇಟರ್ ಮಗಳು ನೇಹಾ ಹಿರೇಮಠ ಹತ್ಯೆ ಪ್ರಕರಣಕ್ಕೆ ಸಂಬಂಧಿಸಿದಂತೆ ಇದೀಗ ನೇಹಾ ಹಾಗೂ ಫಯಾಸ್ ಇಬ್ಬರು ಜೊತೆಗೆ ಇರುವ ರೀಲ್ಸ್ ವಿಡಿಯೋವೊಂದು ಸಾಮಾಜಿಕ ಜಾಲತಾಣದಲ್ಲಿ ವೈರಲ್ ಆಗುತ್ತಿದೆ.

https://www.instagram.com/reel/C58XBtcvn5d/?igsh=ODI2eHprODJjMDZv

ಹೌದು, ಗುರುವಾರ ಹುಬ್ಬಳ್ಳಿಯ ಪ್ರತಿಷ್ಠಿತ ಶಿಕ್ಷಣ ಸಂಸ್ಥೆ ಬಿವ್ಹಿಬಿ ಆವರಣದಲ್ಲಿ ಅನ್ಯ ಕೋಮಿನ ಯುವಕ ಫಯಾಜ್ ಕಾರ್ಪೋರೇಟರ್ ನಿರಂಜನಯ್ಯ ಹಿರೇಮಠ ಅವರ ಮಗಳು ನೇಹಾ ಹಿರೇಮಠ (24) ಎಂಬಾಕೆಯನ್ನು ಚಾಕುವಿನಿಂದ ಮನಬಂದಂತೆ ಇರಿದು ಬರ್ಬರವಾಗಿ ಹತ್ಯೆ ಗೈದಿದ್ದಾನೆ.

ಈ ಘಟನೆ ಸಂಬಂಧ ಈಗಾಗಲೇ ಪೋಲಿಸರು ಆರೋಪಿಯನ್ನು ಬಂಧಿಸಿ, ತನಿಖೆ ನಡೆಸುತ್ತಿದ್ದಾರೆ. ಅಷ್ಟೇ ಅಲ್ಲದೇ ರಾಜ್ಯಾದ್ಯಂತ ನೇಹಾ ಹಿರೇಮಠ ಸಾವಿಗೆ ನ್ಯಾಯ ಸಿಗಬೇಕು, ಆರೋಪಿಯನ್ನು ಗಲ್ಲಿಗೆ ಏರಿಸಬೇಕೆಂದು ಪ್ರತಿಭಟನೆಗಳು ನಡೆಯುತ್ತಿದೆ. ಸಾಮಾಜಿಕ ಜಾಲತಾಣದಲ್ಲಿ justice for neha ಎಂಬ ಬರಹವನ್ನು ಹಾಕಿ ಸರ್ಕಾರಕ್ಕೆ ಒತ್ತಾಯಿಸುತ್ತಿದ್ದಾರೆ.

https://www.facebook.com/share/r/KnNAp8qbTjZcCSKW/?mibextid=WC7FNe

ಇದೀಗ ನೇಹಾ ಹಾಗೂ ಫಯಾಜ್ ಇಬ್ಬರು ಜೊತೆಗಿರುವ ರೀಲ್ಸ್ ವಿಡಿಯೋ ವೈರಲ್ ಅಗಿದೆ. ಈ ಹಿಂದೆ ಇಬ್ಬರ ಸ್ನೇಹದ ಸಂದರ್ಭದಲ್ಲಿ ಒಟ್ಟಿಗೆ ಸೇರಿ ಹುಟ್ಟು ಹಬ್ಬ ಆಚರಣೆ ಹಾಗೂ ಪಾರ್ಟಿಗಳಲ್ಲಿ‌ ಪಾಲ್ಗೊಂಡಿದ್ದ ಫೋಟೋಗಳ ರೀಲ್ಸ್ ವಿಡಿಯೋ ವೈರಲ್ ಆಗುತ್ತಿದೆ. ಇದಕ್ಕೆ ನೆಟ್ಟಿಗರು ತಮ್ಮ ತಮ್ಮ ಅಭಿಪ್ರಾಯ ಹಂಚಿಕೊಳ್ಳುತ್ತಿದ್ದಾರೆ.

RELATED ARTICLES

LEAVE A REPLY

Please enter your comment!
Please enter your name here

- Advertisment -spot_img

Most Popular

Recent Comments