ಹಣಕಾಸಿನ ವಿಚಾರಕ್ಕೆ ಸುಧೀರ್ ಹಾಗೂ ಸಾಗರ ನಡುವೆ ಜಗಳ
ಘಟನಾ ಸ್ಥಳಕ್ಕೆ ಧಾರವಾಡ ಎಸ್ಪಿ ಗೋಪಾಲ ಬ್ಯಾಕೋಡ ಭೇಟಿ
ಗಲಾಟೆ ಮಾಡಿಕೊಂಡ ಇಬ್ಬರು ವರೂರ ಗ್ರಾಮದ ನಿವಾಸಿಗಳು
ಹುಬ್ಬಳ್ಳಿ: ಹಣಕಾಸಿನ ವಿಚಾರವಾಗಿ ಇಬ್ಬರ ಮಧ್ಯೆ ನಡೆದ ಗಲಾಟೆ ಕೊಲೆಯಲ್ಲಿ ಅಂತ್ಯವಾಗಿರೋ ಘಟನೆ ತಾಲೂಕಿನ ವರೂರ ಹತ್ತಿರದ ಜಗದೀಶ್ ದಾಬಾದಲ್ಲಿ ನಡೆದಿದೆ. ಸುಧೀರ್ ಹುಲಗುರ (35) ಮೃತ ವ್ಯಕ್ತಿ.
ಹಣಕಾಸಿನ ವಿಚಾರವಾಗಿ ಸುಧೀರ್ ಹಾಗೂ ಸಾಗರ ಎಂಬುವವರ ನಡುವೆ ಗಲಾಟೆ ನಡೆದಿದೆ. ಇಬ್ಬರು ಹಳೆಯ ಕ್ಷುಲ್ಲಕ ಕಾರಣ ಹಾಗೂ ಹಣಕಾಸಿನ ವಿಚಾರವಾಗಿ ಕುಡಿದು ಗಲಾಟೆ ಮಾಡಿಕೊಂಡಿದ್ದರು. ಗಲಾಟೆ ಮಾಡಿಕೊಂಡ ಇಬ್ಬರು ವರೂರ ಗ್ರಾಮದ ನಿವಾಸಿಗಳು.
ಸುಧೀರ್ ಹುಲಗುರನನ್ನು ಕೊಲೆ ಮಾಡಿದ ಸಾಗರ ಎಂಬಾತನಿಗೆ ಸ್ಥಳೀಯರು ಥಳಿಸಿದ್ದಾರೆ.
ಪರಿಣಾಮ ಸಾಗರನ ಸ್ಥಿತಿ ಚಿಂತಾಜನಕವಾಗಿದೆ. ಕೂಡಲೇ ಆತನನ್ನು ಕಿಮ್ಸ್ ಆಸ್ಪತ್ರೆಗೆ ದಾಖಲಿಸಿ ಚಿಕಿತ್ಸೆ ನೀಡಲಾಗುತ್ತಿದೆ. ಈ ವಿಷಯ ತಿಳಿದ ಕೂಡಲೇ ಸ್ಥಳಕ್ಕೆ ಧಾರವಾಡ ಎಸ್ಪಿ ಗೋಪಾಲ ಬ್ಯಾಕೋಡ ಭೇಟಿ ನೀಡಿ ಪರಿಶೀಲನೆ ನಡೆಸಿದ್ದಾರೆ. ಈ ಘಟನೆ ಸಂಬಂಧ ಹುಬ್ಬಳ್ಳಿ ಗ್ರಾಮೀಣ ಪೋಲಿಸ್ ಠಾಣೆ ವ್ಯಾಪ್ತಿಯಲ್ಲಿ ಪ್ರಕರಣ ದಾಖಲಾಗಿದೆ.