ಕಾರವಾರ, ಫೆ.25: ಬೈಕ್ ಓವರ್ಟೇಕ್ ವಿಚಾರವಾಗಿ ಆರು ಮಂದಿ ಇದ್ದ ತಂಡವೊಂದು ಯುವಕನೊಬ್ಬನ್ನು ಕೊಲೆ (Murder) ಮಾಡಿದ ಆರೋಪ ಉತ್ತರ ಕನ್ನಡ (Uttara Kannada) ಜಿಲ್ಲೆಯ ಯಲ್ಲಾಪುರ (Yellapur) ತಾಲೂಕಿನ ಹುಣಶೆಟ್ಟಿಕೊಪ್ಪ ಜಾತ್ರೆಯಲ್ಲಿ ಕೇಳಿಬಂದಿದೆ. ಹಳಿಯಾಳ ಮೂಲದ ಪ್ರಜ್ವಲ್ ಕಕ್ಕೇರಿಕರ (24) ಕೊಲೆಯಾದ ಯುವಕನಾಗಿದ್ದಾನೆ.
ಕುಟುಂಬಸ್ಥರ ಕೊಲೆ ಆರೋಪ ಮಾಡಿದ್ದು, ಪ್ರಜ್ವಲ್ ಮೇಲೆ ಹಲ್ಲೆಗೈದು ಸಾಯಿಸಿದ್ದಾರೆಂದು ಆರೋಪಿಸಿದ್ದು, ಯಲ್ಲಾಪುರ ಪೊಲೀಸ್ ಠಾಣೆಯಲ್ಲಿ ಪ್ರಕರಣ ದಾಖಲಾಗಿದೆ. ಸಾಣಾ ಮರಾಠಿ, ಅನಿಕೆತ್ ಮಿರಾಶಿ, ರಿತೇಶ್ ಪಾಟೀಲ್, ಪಾಂಡುರಂಗ ಕಳಸುರಕರ್, ಪ್ರಶಾಂತ್ ಕಲಸುರಕರ್ ಹಾಗೂ ರೂಪೇಶ್ ಆರೋಪಿಗಳೆಂದು ಪೊಲೀಸರ ಗುರುತಿಸಿದ್ದಾರೆ. ಬೈಕ್ ಒವರಟೆಕ್ ಮಾಡುವ ವಿಷಯದಲ್ಲಿ ನಡೆದ ಜಗಳದಲ್ಲಿ ಯುವಕ ಪ್ರಜ್ವಲ್ನನ್ನು ಥಳಿಸಿದ್ದಾರೆ. ಈ ವೇಳೆ ಬಲವಾದ ಹೊಡೆತಕ್ಕೆ ಪ್ರಜ್ವಲ್ ಮೃತಪಟ್ಟಿದ್ದಾನೆ ಎಂದು ಹೇಳಲಾಗುತ್ತಿದೆ.